ನಟಿ ನಯನತಾರಾ ಇತ್ತೀಚೆಗೆ ಡಿವೋರ್ಸ್ ಕಾರಣದಿಂದ ಸಖತ್ ಸುದ್ದಿಯಾಗ್ತಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಧ್ಯೆ ಎಲ್ಲವು ಸರಿ ಇಲ್ಲ ಎಂಬ ಸುದ್ದಿ ಹರಿದಾಡಿತ್ತು. ಇದೀಗ ನಯನತಾರಾ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ನಯನತಾರಾ ಹಾಗೂ ವಿಘ್ನೇಶ್ ಮಕ್ಕಳೊಂದಿಗೆ ವಿದೇಶ ಪ್ರಯಾಣ ಬೆಳೆಸಿದ್ದಾರೆ.ಸದ್ಯ ನಯನತಾರಾ ಶೇರ್ ಮಾಡಿರುವ ಫೋಟೋ ನೋಡಿದ ಅಭಿಮಾನಿಗಳು ಜೋಡಿಯ ಮಧ್ಯೆ ಎಲ್ಲವು ಸರಿ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ನಯಾನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು. ಇದರಿಂದ ಇವರ ವಿಚ್ಛೇದನ ವದಂತಿ ಹುಟ್ಟಿತ್ತು. ಇದಾದ ಬಳಿಕ ಅವರು ಮತ್ತೆ ಪತಿಯನ್ನು ಫಾಲೋ ಮಾಡೋಕೆ ಆರಂಭಿಸಿದ್ದರು. ನಂತರ ಅವರು ಹಾಕಿದ್ದ ಸ್ಟೇಟಸ್ ವಿಚ್ಛೇದನ ವದಂತಿಯನ್ನು ಹೆಚ್ಚಿಸಿತ್ತು. ‘ಹೌದು ನಾನು ಕಳೆದು ಹೋಗಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ವಿಚಾರದಿಂದ ಫ್ಯಾನ್ಸ್ ಆತಂಕಗೊಂಡಿದ್ದರು. ಇದೀಗ ಗಾಳಿ ಸುದ್ದಿಗೆ ನಯನತಾರಾ ಫೋಟೋದ ಮೂಲಕ ಬ್ರೇಕ್ ಹಾಕಿದ್ದಾರೆ.