ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಿರಿ ಅವರು ಇತ್ತೀಚೆಗೆ ಉದ್ಯಮಿ ಪ್ರಭಾಕರ್ ಬೋರೇಗೌಡ ಅವರನ್ನು ಮದುವೆಯಾಗಿದ್ದಾರೆ.
ಸಾಕಷ್ಟು ವರ್ಷಗಳ ಕಾಲ ಮದುವೆಯಾಗದೆ ಹಾಗೆ ಉಳಿದಿದ್ದ ಸಿರಿ ಅವರು ಮಂಡ್ಯ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ಸೆಟಲ್ ಆಗಿರುವ ಪ್ರಭಾಕರ್ ಅವರನ್ನು ವರಿಸಿದ್ದಾರೆ. ಪ್ರಭಕರ್ ಅವರಿಗೆ ಉದ್ಯಮದ ಜೊತೆಗೆ ಚಿತ್ರರಂಗದಲ್ಲೂ ನಂಟು ಹೊಂದಿದ್ದಾರೆ.
ಇತ್ತೀಚೆಗೆ ಅತ್ಯಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ವಿವಾಹವಾಗಿದ್ದ ಸಿರಿ ಇದೀಗ ಪತಿ ಜೊತೆಗಿನ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮುದ್ದಾದ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಿರಿ ಅವರು ಸ್ಪರ್ಧಿಸಿದ್ದರು. ಈ ವೇಳೆ ಅವರು ವಿವಾಹದ ಬಗ್ಗೆ, ವಿವಾಹ ಆದರೆ ಆಗಬಹುದಾದ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿತ್ತು.
ಮದುವೆ ಬಳಿಕ ಸಿರಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈಗ ಪತಿ ಜೊತೆ ಇರೋ ಫೋಟೋಗಳನ್ನು ಸಿರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಸಿರಿ ಅವರು ‘ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀನು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತಿ ಮೇಲಿರುವ ಪ್ರೀತಿ ಎಂಥದ್ದು ಎಂಬುದನ್ನು ಬರೆದುಕೊಂಡಿದ್ದಾರೆ.
ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಈ ಮದುವೆಗೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಸಿರಿ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಜವಾಬ್ದಾರಿ ಸಿರಿ ಮೇಲೆಯೆ ಇದೇ. ಒಂದೊಮ್ಮೆ ಮದುವೆ ಆದರೆ ಇದಕ್ಕೆಲ್ಲ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಭಯ ಅವರಿಗೆ ಈ ಮೊದಲು ಕಾಡಿತ್ತು. ಇದೀಗ ಆ ಭಯವನ್ನು ಸಿರಿ ಪತಿ ದೂರ ಮಾಡಿದ್ದಾರೆ.