ಮಂಡ್ಯ: ರಜಾ ದಿನ ಕಳೆಯಲು ಸಂಬಂಧಿಕರ ಮನಗೆ ತೆರಳಿದ್ದ 2 ಕುಟುಂಬಗಳ ಒಟ್ಟು ಐವರುಕಾವೇರಿ ನಾಲೆಗೆ ಈಜಲು ಹೋಗಿದ್ದ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆಯ ಬಸರಾಳು ಸಮೀಪ ನಡೆದಿದೆ.
ಬೆಂಗಳೂರಿನ ನೀಲಸಂದ್ರ ಬಡಾವಣೆಯ ಅನೀಷಾ ಬೇಗಂ(34) ಅವರ ಮಗಳು ಮೆಹತಾಬ್(10) ಅಮಾನುಲ್ಲಾ ಎಂಬವ ಮಕ್ಕಳಾದ ತಸ್ಸ್ಮೀಯಾ(22), ಅಫೀಕಾ(22), ಅಶ್ರಕ್(28) ಮೃತಪಟ್ಟವರು. ಇವರಲ್ಲಿ ಹನಿಸಾ, ತಸ್ಸ್ಮೀಯ, ಮಹತಾಬ್ ಮೃತದೇಹಗಳನ್ನು ನಾಲೆಯಿಂದ ಹೊರತೆಗೆಯಲಾಗಿದ್ದು ಇಬ್ಬರ ದೇಹಗಳಿಗಾಗಿ ಅಗ್ನಿಶಾಮಕ ದಳದವರು ಶೋಧ ಮುಂದುವರಿದಿದೆ.
ಬೆಂಗಳೂರಿನ ನಿವಾಸಿಗಳು ಬಸರಾಳು ಸಮೀಪದ ಹಲ್ಲೇಗೆರೆ ಗ್ರಾಮದ ನೆಂಟರ ಮನೆಗೆ ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಕ್ಕಳಿಗೆ ಬೇಸಿಗೆ ಶಾಲೆ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಂಟರ ಮನೆಗೆ ಆಗಮಿಸಿದ್ದರು. ಈ ವೇಳೆ ಎಲ್ಲರೂ ಎರಡು ಕಾರಿನಲ್ಲಿ ಬಸರಾಳು ಬಳಿಯ ದೊಡ್ಡಕೊತ್ತಗೆರೆಯ ನಾಲೆಗೆ ಈಜಲು ಹೋಗಿದ್ದರು. ಈ ವೇಳೆ 10 ವರ್ಷದ ಮಗು ಮೆಹತಾಬ್ ನೀರಿನಲ್ಲಿ ಸಿಲುಕಿದ್ದು, ಆಕೆಯನ್ನು ರಕ್ಷಿಸಲು ಹೋದ ಉಳಿದ ನಾಲ್ಕು ಮಂದಿಯೂ ನೀರು ಪಾಲಾಗಿದ್ದಾರೆ. ನೀರಿನ ಹರಿವಿನ ರಭಸಕ್ಕೆ ದೇಹಗಳು ಕೊಚ್ಚಿಕೊಂಡು ಹೋಗಿರಬಹುದೆಂದು ಭಾವಿಸಲಾಗಿದೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.