ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನೀಟ್ ಪರೀಕ್ಷೆ ಅಕ್ರಮ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪರೀಕ್ಷೆಗೆ ಒಂದು ದಿನದ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ವಿಚಾರ ಹೊರಬಿದ್ದರೆ, ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೀಗ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಕೂಡ ನೀಟ್ ಅಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ನೀಟ್ ಬೇಡವೇ ಬೇಡ ಅಂತ ಅಸಮಧಾನ ಹೊರಹಾಕಿದ್ದಾರೆ. ಜೊತೆಗೆ
ಒಂದೊಂದೇ ಅಕ್ರಮಗಳು ಕಳಚಿಕೊಳ್ತಿರೋ ಸಂಬಂಧ ಪರೀಕ್ಷೆಯ ಅಕ್ರಮ ಸರಿ ಪಡಿಸದಿದ್ದರೆ ಪ್ರತಿಭಟನೆ ಎಚ್ಚರಿಕೆಯನ್ನ ಕನ್ನಡ ಪರಸಂಘಟನೆ ಸೇರಿ ವಿದ್ಯಾರ್ಥಿ ಸಂಘಟನೆಗಳು ಕರೆ ಕೊಟ್ಟಿದ್ದಾರೆ.
ನೀಟ್ ಪರೀಕ್ಷೆ ಬೇಡವೇ ಬೇಡ, ಸಿಇಟಿ ಜಾರಿಗೊಳಿಸಿ ಅಂತ ವಿವಿಧ ಸಂಘಟನೆಗಳು ಬೇಡಿಕೆಯನ್ನ ಮುಂದಿಟಿವೆ.