ಬೆಂಗಳೂರು: ಹೋಮಿಯೋಪತಿ ವೈದ್ಯಕೀಯ ಕೋರ್ಸ್ಗಳಿಗೆ ನೀಟ್ ಕಡ್ಡಾಯ ಪದ್ಧತಿಯನ್ನು ಬೆಂಗಳೂರಿನ ಹೈಕೋರ್ಟ್ ಎತ್ತಿ ಹಿಡಿದಿದೆ. ಕರ್ನಾಟಕ ಖಾಸಗಿ ಹೋಮಿಯೋಪತಿ ಮೆಡಿಕಲ್ ಕಾಲೇಜಸ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ಸ್ ಸೇರಿದಂತೆ ಇತರೆ ಖಾಸಗಿ ಕಾಲೇಜುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್ಕುಮಾರ್ ಎ.
ಪಾಟೀಲ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹೊಂದಿರುವ ಹಕ್ಕು ಸಂಪೂರ್ಣವಾಗಿದ್ದಲ್ಲ. ಅದನ್ನು ಸರ್ಕಾರಗಳು ನಿಯಂತ್ರಿಸಬಹುದಾಗಿದೆ. ಈ ಪರೀಕ್ಷೆಯಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಬಿಹೆಚ್ಎಂಎಸ್ ಕೋರ್ಸ್ಗೆ ಸೇರಿಸಿಕೊಳ್ಳುವುದು ಮತ್ತು ಆ ವಿದ್ಯಾರ್ಥಿಗಳು ಮುಂದೆ ಚಿಕಿತ್ಸೆ ನೀಡುವಂತವರಾಗುವ ಹಿತಾಸಕ್ತಿಯೂ ಅಡಗಿರಲಿದೆ. ಇದೇ ಕಾರಣದಿಂದ ಎಲ್ಲ ಹೋಮಿಯೋಪತಿ ಕಾಲೇಜುಗಳಲ್ಲಿ ಕೋರ್ಸ್ಗಳಿಗೆ ಮೆರಿಟ್ ಆಧಾರದಲ್ಲಿ ನೋಂದಣಿ ಮಾಡುವುದಕ್ಕಾಗಿ ನೀಟ್ ಪರೀಕ್ಷೆಯನ್ನು ಶಾಸನ ಸಭೆ ಕಡ್ಡಾಯಗೊಳಿಸಿದೆ. ಇದಕ್ಕೆ ಕಾಯಿದೆಯ ಸೆಕ್ಷನ್ 14ರ ಪ್ರಕಾರ ಅವಕಾಶ ಕಲ್ಪಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.