ಬೆಂಗಳೂರು: ನಿರ್ಲಕ್ಷ್ಯ ಇರಬೇಕು ಅಂದ್ರೆ ಅಷ್ಟೋದಾ. ಜನರ ಜೀವನವನ್ನೇ ತೆಗೆಯೋ ಮಟ್ಟಿಗೆ ಅಂದ್ರೆ ಹೇಗೆ. ಹೌದು ಬೆಂಗಳೂರಿನಲ್ಲಿ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ ಬೇಜವಾಬ್ದಾರಿ ಮಿತಿ ಮೀರಿದೆ. ಜನರ ಜೀವನವನ್ನ ರಕ್ಷಣಾ ಮಾಡಬೇಕಾದ ಅಧಿಕಾರಿಗಳು ಪ್ರಾಣವನ್ನ ತೆಗೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ವಿದ್ಯುತ್ ಅವವಢದಿಂದ ತಾಯಿ ಮಗು ದರಂತ ಸಾವನ್ನಪ್ಪಿದ್ರೂ ಅಧಿಕಾರಿಗಳು ಗಾಢ ನಿದ್ರೆಯಿಂದ ಇನ್ನೂ ಎದ್ದಿಲ್ಲ. ನಗರದ ಎಲ್ಲೆಂದ್ರೆ ವಿದ್ಯುತ್ ಸ್ಪಾಟ್ ಗಳು ಸಾವಿನ ತಾಣವಾಗಿ ಮಾರ್ಪಟ್ಟಿವೆ.
ಬಿಬಿಎಂಪಿ ನಗರದ ವಾಹನ ಸವಾರರನ್ನ ಬಲಿಪಡೆಯುತ್ತಿದೆ. ಬೆಸ್ಕಾಂ ಪುಟ್ಪಾತ್ ಪಾದಾಚಾರಿಗಳನ್ನ ಬಲಿಪಡೆಯುತ್ತಿದೆ. ಜಲಮಂಡಳಿ, ಮೆಟ್ರೋ ಕಾಮಗಾರಿಗಳಿಂದ ಜನ ಸುಸ್ತು ಆಗಿಬಿಟ್ಟಿದ್ದಾರೆ. ಈ ಸರ್ಕಾರಿ ಇಲಾಖೆಗಳು ಮಾಡೋ ಬೇಜವಾಬ್ದಾರಿ ಕೆಲ್ಸ ಒಂದೆರಡು ಅಲ್ಲ ಬಿಡಿ. ಸಾಲು ಸಾಲು ಅವಾಂತರಗಳು ಮಾಡಿದ್ರೂ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ ಹೀಗಾಗಿ ಜನ ರೋಡ್ ರೋಡ್ ನಲ್ಲಿ ಬೀದಿ ಹೆಣವಾಗ್ತಿದ್ದಾರೆ. ಇತ್ತೀಚಿಗೆ ಅಂತೂ ಬೆಸ್ಕಾಂ ಮಾಡೋ ಹೊಣೆಗೇಡಿತನದಿಂದ ಜನ ಸಾವನ್ನಪ್ಪುತ್ತಿದ್ದಾರೆ.ಆದ್ರೂ ಬೆಸ್ಕಾಂ ಅಧಿಕಾರಿಗಳ ;ನಿರ್ಲಕ್ಷ್ಯ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.
ಹೌದು ಕಾಡುಗೋಡಿ ಗ ತಾಯಿಮಗು ವಿದ್ಯುತ್ ತಂತಿ ತಗಲಿ ಮೃತಪಟ್ಟ ಬಳಿಕ ನಗರದಲ್ಲಿನ ಯಾವ್ಯಾವ ಡೇಂಜರಸ್ ಡೆಡ್ಲಿಸ್ಟ್ ಸ್ಪಾಟ್ ಗಳನ್ನು ಇದಾವೋ ಅಂತಹ ಸ್ಥಳಗಳನ್ನ ಹುಡುಕಿ ನವಂಬರ್ 30ರ ಒಳಗೆ ಸರಿಪಡಿಸುತ್ತೇವೆ ಅಂತ ಬೆಸ್ಕಾಂ ಹೇಳಿತ್ತು. ಹಾಗಾದ್ರೆ ಬಿಬಿಎಂಪಿ ಅಂತಹ ಡೇಂಜರಸ್ ಸಾಪ್ಟ್ ಗಳನ್ನ ಸರಿಪಡಿಸಿದೆಯಾ ಖಂಡಿತ ಇಲ್ಲ. ಯಾಕೆಂದ್ರೆ ನಗರದಲ್ಲಿ ಡೇಂಜರ್ ವಿದ್ಯುತ್ ಸ್ಪಾಟ್ ಗಳು ಹೆಚ್ಚಿವೆ.ಕಾಡುಗೋಡಿ ತಾಯಿ ಮಗುವಿನ ಸಾವು ಎಲ್ಲರನ್ನ ಬೆಚ್ಚಿ ಬೀಳಿಸಿತ್ತು . ಬೆಸ್ಕಾಂ ನಿರ್ಲಕ್ಷದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ಕಾಡುಗೋಡಿಯಲ್ಲಿ ಫುಟ್ಪಾತ್ ಮೇಲೆ ಬರುವಾಗ ಪುಟ್ ಪಾತ್ ಬಿದ್ದಿದ್ದ ಹೈ ಟೆನ್ಶನ್ ವೈಯರ್ ತಗುಲಿ ನೋಡು ನೋಡುತ್ತಲೇ ತಾಯಿ ಮಗು ಸ್ಥಳದಲ್ಲೇ ಹೊತ್ತಿ ಉರಿದು ಬೂದಿಯಾಗಿ ಹೋಗಿದ್ರು.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಪ್ರಾಣಗಳು ಬಲಿಯಾಗಿ ಹೋಗಿದ್ದು. ಅಪಾಯಕಾರಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫರ್ ಗಳು ಜನರ ಪಲಿ ಪಡಿಯೋಕೆ ಬಾಯ್ ತೆರೆದು ಕುಳಿತಿವೆ. ಇನ್ನು ಈ ಘಟನೆ ನಡೆದ ಬಳಿಕ ಬೆಸ್ಕಾಂ ಅಧಿಕಾರಿಗಳು ಸಭೆ ಮೇಲೆ ಸಭೆ ನಡೆಸಿ ಕಾಟಾಚಾರಕ್ಕೆ ಟಾಸ್ ಫೋರ್ಸ್ ಗಳನ್ನು ರಚನೆ ಮಾಡಿ ನಗರದಲ್ಲಿನ ಅಪಾಯಕಾರಿ ಡೆಲ್ಲಿ ಡೇಂಜರಸ್ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫರ್ ಗಳನ್ನು ನವಂಬರ್ 30ರೊಳಗೆ ಸರಿಪಡಿಸೋದಾಗಿ ಹೇಳಿತ್ತು. ಆದರೆ ಡೆಡ್ ಲೈನ್ ಮುಗಿದ್ರೂ ಬೆಸ್ಕಾಂ ಬೇಜವಾಬ್ದಾರಿ ಅಧಿಕಾರಿಗಳು ಇದುವರೆಗೂ ಯಾವುದೇ ಏರಿಯಾದಲ್ಲೂ ಸರಿಪಡಿಸುವ ಕೆಲಸ ಮಾಡಿಲ್ಲ.
ಇನ್ನು ಕೇವಲ ದುರಂತ ನಡೆದ ಬಳಿಕ ವಷ್ಟೇ ಸಭೆ ಮೇಲೆ ಸಭೆ ನಡೆಸಿ ಟಾಸ್ಕ್ ಹಾಕಿಕೊಂಡಿದ್ದೇವೆ ಎಲ್ಲವೂ ಸರಿ ಮಾಡ್ತೇವೆ ಅಂತ ಹೇಳಿದ್ದೆ ಆಯ್ತು ಆದರೆ ಇದುವರೆಗೂ ಯಾವುದೇ ರೀತಿಯಾದ ಸರಿಪಡಿಸುವ ಕೆಲಸ ಮಾಡಿಲ್ಲ. ನಗರದಲ್ಲಿ ಯಾವುದೇ ಏರಿಯಾದಲ್ಲಿ ಅಪಾಯಕಾರಿ ವಿದ್ಯುತ್ ಕಂಬಗಳಿದ್ದರೆ ಸರಿಪಡಿಸುವ ಕೆಲಸ ವಿಫಲವಾಗಿದೆ. ಕಾಡುಗೋಡಿಯ ದುರಂತದ ಬಳಿಕ ನವಂಬರ್ 30 ರ ಒಳಗಾಗಿ ಅಪಾಯಕಾರಿ ಕಂಬಗಳನ್ನು ಸರಿಪಡಿಸುವುದಾಗಿ ಹಾಗೂ ಏರಿಯಾ ಗಳಲ್ಲಿ ತುಂಬಾ ಅಪಾಯಕಾರಿ ಆಗಿರುವ ಟ್ರಾನ್ಸ್ಫಾರ್ಮರ್ಗಳನ್ನ ಅವಾಂತರ ಗಳಿಸುತ್ತೇವೆ ಅಂತ ಮೊದಲು ಎಲ್ಲಾ ಡೇಂಜರಸ್ ಕಂಬಗಳನ್ನು ಲೆಕ್ಕ ಮಾಡಿ ಮಾನಿಟಿರಿಂಗ್ ಇನ್ ಮಾಡ್ತೀವಿ ಅಂತ ಹೇಳಿ ಮತ್ತೆ ಏನು ಆಗಿಲ್ಲ ಅನ್ನೋ ರೀತಿ ವರ್ತಿಸ್ತಾ ಇದೆ.
ಸೇಮ್ ಟು ಸೇಮ್ ಬಿಬಿಎಂಪಿ ಗುಂಡಿಗಳ ವಿಚಾರದಲ್ಲಿ ಕಥೆ ಹೇಳೋ ಹಾಗೆ ಬೆಸ್ಕಾಂ ಇಲಾಖೆಯು ಕಥೆ ಹೇಳಿ ಕೈತೋಳೆದು ಕೊಳ್ಳುವ ಕೆಲಸ ಮಾಡುತ್ತಿದೆ. ನೋಡಿದ್ರಲ್ಲ ಬೆಸ್ಕಾಂನ ಕಾಟಾಚಾರದ ಟಾಸ್ಕ್ ಹೇಗಿದೆ ಅಂತ. ಇದೆಲ್ಲಾ ನೋಡಿದ ಜನರು ಮತ್ತೆ ಘಟನೆಯಾದ್ರೆ ಮಾತ್ರ ಎಚ್ಚೆತ್ತುಕೊಳ್ಳುತ್ತಾ ಬೆಸ್ಕಾಂ ಇಲಾಖೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನಾದ್ರೂ ಬೆಸ್ಕಾಂ ಮೈ ಮರೆಯದೆ ನಗರದಲ್ಲಿನ ಡೇಂಜರಸ್ ಡೆಡ್ಲಿ ಕಂಬಗಳನ್ನು ಹಾಗೂ ಟ್ರಾನ್ಸ್ಫರ್ ಗಳನ್ನ ಸರಿ ಮಾಡ್ಲಿ ಅನ್ನೋದೇ ಬೆಂಗಳೂರು ಜನರ ಆಶಯ…