ಭೀಕರ ಮಳೆ ಹಿನ್ನೆಲೆಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಶುಕ್ರವಾರ ಎರಡು ಬಸ್ಗಳು ನದಿಗೆ ಬಿದಿದ್ದವು. ಘಟನೆಯಲ್ಲಿ ಎರಡು ಬಸ್ ನಲ್ಲಿದ್ದು ಸುಮಾರ 51 ಮಂದಿ ನಾಪತ್ತೆಯಾಗಿದ್ದರು. ಸದ್ಯ ರಕ್ಷಣಾ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಏಳು ಜನರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿವಿಧ ಪ್ರದೇಶಗಳ ನದಿ ದಡದಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಕಾಣೆಯಾಗಿರುವ ಬಸ್ ಮತ್ತು ಇತರ ಪ್ರಯಾಣಿಕರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
‘ಮೃತದೇಹಗಳ ಗುರುತು ಪತ್ತೆಯಾಗಿದ್ದು, ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಮೃತರಲ್ಲಿ ಮೂವರು ಭಾರತೀಯರಾಗಿದ್ದು, ಉಳಿದ ನಾಲ್ವರು ನೇಪಾಳಿ ಪ್ರಜೆಗಳು‘ ಎಂದು ಅಧಿಕಾರಿ ಖೀಮಾ ನಂದ ಭುಸಾಲ್ ಮಾಹಿತಿ ನೀಡಿದ್ದಾರೆ.
ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಉತ್ತರ ಭಾಗಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎರಡು ಬಸ್ಗಳು ಶುಕ್ರವಾರ ಮುಂಜಾನೆ ಸಿಮಾಲ್ತಾಲ್ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ನದಿಗೆ ಬಿದ್ದಿದ್ದವು.