ವಿಶ್ವದ 5ನೇ ಅತೀ ಎತ್ತರದ ಶಿಖರ ಮಕಾಲು ಪರ್ವತವನ್ನು ಏರಿದ ಬಳಿಕ ನೇಪಾಳದ ಶೆರ್ಪ(ಮಾರ್ಗದರ್ಶಿ) ಶಿಖರದಲ್ಲಿ ಸಾವನ್ನಪ್ಪಿರುವುದಾಗಿ ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
53 ವರ್ಷದ ತೆಂಜಿ ಶೆರ್ಪ ಸೋಮವಾರ 27,838 ಅಡಿ ಎತ್ತರದ ಮಕಾಲು ಪರ್ವತದ ಶಿಖರವನ್ನು ವಿದೇಶಿ ಪರ್ವತಾರೋಹಿಗಳ ಜತೆ ಯಶಸ್ವಿಯಾಗಿ ಏರಿದ್ದರು. ಆದರೆ ಪರ್ವತದಿಂದ ಕೆಳಗೆ ಇಳಿಯುವಾಗ ಮೃತಪಟ್ಟಿದ್ದಾರೆ.
ಶೆರ್ಪ ಅಸೌಖ್ಯಗೊಂಡಾಗ ತಂಡದ ಇತರ ಸದಸ್ಯರ ನೆರವಿನಿಂದ ಕೆಳಗೆ ಇಳಿಯುವ ಪ್ರಯತ್ನದಲ್ಲಿ ಮೃತಪಟ್ಟಿದ್ದಾರೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ರಾಕೇಶ್ ಗುರುಂಗ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಬಾರಿ ಮಕಾಲು ಪರ್ವತ ಏರಲು 59 ವಿದೇಶಿ ಪರ್ವತಾರೋಹಿಗಳಿಗೆ ನೇಪಾಳ ಸರಕಾರ ಅನುಮತಿ ನೀಡಿದೆ.