`ಎವರೆಸ್ಟ್ ಮ್ಯಾನ್’ ಎಂದೇ ಖ್ಯಾತಿ ಘಳಿಸಿರುವ ನೇಪಾಳದ ಕಮಿರಿತ ಶೆರ್ಪ ಭಾನುವಾರ 29ನೇ ಬಾರಿ ವಿಶ್ವದ ಅತೀ ಎತ್ತರದ ಶಿಖರ ಎವರೆಸ್ಟ್ ಪರ್ವತವನ್ನು ಏರುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಪರ್ವತಾರೋಹಿ ಮತ್ತು ಗೈಡ್ ಆಗಿರುವ 54 ವರ್ಷದ ಶೆರ್ಪ ಕಳೆದ ವರ್ಷ 8848.86 ಮೀಟರ್ ಎತ್ತರದ ಎವರೆಸ್ಟ್ ಅನ್ನು ಒಂದೇ ವಾರದಲ್ಲಿ ಎರಡು ಬಾರಿ ಏರಿದ್ದು ಇದು 28ನೇ ಬಾರಿಯ ಎವರೆಸ್ಟ್ ಆರೋಹಣವಾಗಿದೆ. ಈ ಬಾರಿಯೂ ಒಂದೇ ವಾರದಲ್ಲಿ ಎರಡು ಬಾರಿ ಏರುವ ಯೋಜನೆಯಿದೆ ಎಂದವರು ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ 7:25ಕ್ಕೆ ಕಮಿರಿತ ಶೆರ್ಪ ಸಾಗರ್ಮಾತ ಪರ್ವತದ ಶಿಖರಕ್ಕೆ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಅವರಿಗೆ ಮತ್ತು ತಂಡಕ್ಕೆ ಅಭಿನಂದನೆಗಳು’ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ಟ್ವೀಟ್(ಎಕ್ಸ್) ಮಾಡಿದೆ. ಎವರೆಸ್ಟ್ ಪರ್ವತಕ್ಕೆ ನೇಪಾಳದಲ್ಲಿ ಸಾಗರ್ಮಾತ ಶಿಖರ ಎಂಬ ಹೆಸರಿದೆ. ನೇಪಾಳದೆ ಮತ್ತೊಬ್ಬ ಪರ್ವತಾರೋಹಿ ಪಸಂಗ್ ದವಾ ಶೆರ್ಪ ಎವರೆಸ್ಟ್ ಶಿಖರವನ್ನು 27 ಬಾರಿ ಏರಿದ್ದ ದಾಖಲೆಯನ್ನು ಕಳೆದ ವರ್ಷ ಕಮಿರಿತ ಶೆರ್ಪ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.