ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ಗೆ ಎಂಟ್ರಿ ಕೊಡೋಕೆ ಯತ್ನ ಮಾಡಿದ ಮೂವರನ್ನು ಅರೆಸ್ಟ್ ಮಾಡಲಾಗಿದೆ
ಇನ್ನು ಬಂಧಿತರನ್ನು ಖಾಸಿಂ, ಮೋನೀಶ್ ಮತ್ತಿ ಸೋಯೆಬ್ ಎಂದು ಗುರುತಿಸಲಾಗಿದೆ.
ಗುರುವಾರ ಭದ್ರತಾ ಸಿಬ್ಬಂದಿ ನಿತ್ಯದ ನಡೆಸುವಂತೆ ತಪಾಸಣೆ ವೇಳೆ ಈ ಮೂರು ಕಾರ್ಮಿಕರು ನಕಲಿ ಆಧಾರ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಸಂಸತ್ ಭವನದ ಎದುರು ನಿಯೋಜನೆಗೊಂಡಿರುವ CISF ಭದ್ರತಾ ಸಿಬ್ಬಂದಿ ಮೂವರನ್ನು ತಪಾಸಣೆ ನಡೆಸಿದಾಗ ಇವರ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಕಂಡು ಬಂದಿದ್ದು, ತಕ್ಷಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಫೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಿಸಿ
ತನಿಖೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ CISF ಸಿಬ್ಬಂದಿ ಹಾಗೂ ದಿಲ್ಲಿ ಪೊಲೀಸರು ಸಂಸತ್ ಭವನದ ಸಂಪೂರ್ಣ ಭದ್ರತೆಯನ್ನು ಮರುಪರಿಶೀಲಿಸಿದ್ದಾರೆ
ಇನ್ನು ಈ ಮೂವರು ನೌಕರರು ಡೀ ವೀ ಪ್ರಾಜೆಕ್ಟ್ ಲಿಮಿಟೆಡ್ ನಿಯೋಜಿಸಿರುವ ಗುತ್ತಿಗೆ ನೌಕರರಾಗಿದ್ದು, ಇವರು ಸಂಸತ್ ಭವನದ ಒಳಗೆ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. IPCಸೆಕ್ಷನ್ಗಳು 465 (ನಕಲಿ), 419 (ವ್ಯಕ್ತಿತ್ವದಿಂದ ವಂಚನೆ), 120B (ಅಪರಾಧದ ಪಿತೂರಿ), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು), ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) ಅಡಿಯಲ್ಲಿ ಮೂವರ ಮೇಲೂ FIR ದಾಖಲಿಸಲಾಗಿದೆ