ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ ಆಗಮನವಾಗಿದೆ.. ಆನೆ ಮರಿಯಾ ಜನನದಿಂದಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ ಮರಿ ಆನೆಯನ್ನು ನೋಡಲು ಪ್ರವಾಸಿಗರನ್ನು ಕೈಬೀಸಿ ಕರಿತಿದೆ.. ಪಶು ವೈದ್ಯರ ಆರೈಕೆಯಲ್ಲಿ ತಾಯಿ ಮಗು ಆರೋಗ್ಯವಾಗಿದ್ದು 26ಕ್ಕೆ ಕಾಡಾನೆಗಳ ಸಂಖ್ಯೆ ಏರಿಕೆಯಾಗಿದೆ…
ಹೀಗೆ ತಾಯಿಯ ಜೊತೆ ಆಟವಾಡುತ್ತಾ ಸ್ವಚ್ಛಂದವಾಗಿ ವಿಹರಿಸುತ್ತಿರುವ ಮರಿಯಾನೆ. ತಾಯಿ ಮತ್ತು ಮರಿಯಾನೆಯನ್ನು ಮುತುವರ್ಜಿಯಿಂದ ಪಾಲನೆ ಮಾಡುತ್ತಿರುವ ಕಾವಾಡಿ ಮಾವುತರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೀಗೆಕಟ್ಟೆಯಲ್ಲಿ…ಹೌದು ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿದೆ. ಸಾಕಾನೆ ವೇದಾ ಗಂಡು ಮರಿಗೆ ಜನ್ಮ ನೀಡಿದ್ದಾಳೆ ಹೀಗಾಗಿ ಬನ್ನೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಟ್ಟು ಆನೆಗಳ ಸಂಖ್ಯೆ ಕೂಡ 26ಕ್ಕೆ ಏರಿಕೆಯಾಗಿದೆ. ಗಣರಾಜ್ಯೋತ್ಸವದಂದೇ ಮರಿ ಆನೆ ಹುಟ್ಟಿದ್ದರಿಂದ ಸ್ವತಂತ್ರ ಹೋರಾಟಗಾರರ ಹೆಸರು ನಾಮಕರಣ ಮಾಡಲಾಗುವುದು ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ
ಒಟ್ನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂಭ್ರಮ ಮನೆ ಮಾಡಿದೆ.. ಜೊತೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಸಾಕಾನೆಗಳನ್ನು ಹೊಂದಿರುವ ಖ್ಯಾತಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪಾತ್ರವಾಗಿರುವುದು ಪ್ರಾಣಿ ಪ್ರಿಯರಿಗೆ ಖುಷಿ ತಂದಿದೆ.