ಕ್ರಿಕೆಟ್ ಲೋಕದಲ್ಲಿ ನೂತನ ಮಿಸ್ಟರ್ 360 ಬ್ಯಾಟರ್ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಸೂರ್ಯ ಕುಮಾರ್ ಯಾದವ್ ಅವರ ವೀಕ್ಸೆಸ್ ಏನೆಂಬುದು ನತ್ತೊಮ್ಮೆ ಜಗಜ್ಜಾಹೀರಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ಎದುರು ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯಇದು ಮುಂಬೈ ಇಂಡಿಯನ್ಸ್ ತಂಡ 18 ರನ್ಗಳ ಸೋಲಿನಲ್ಲಿ ಬಹುಮುಖ್ಯ ಕಾರಣಗಳಲ್ಲಿ ಒಂದಾಯಿತು.
ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಮುಂಬೈಕರ್ ಬ್ಯಾಟಿಂಗ್ನಲ್ಲಿರುವ ವೀಕ್ನೆಸ್ ಕಡೆಗೆ ಬೆಳಕು ಚೆಲ್ಲಿದ್ದಾರೆ. 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಬೌಲರ್ಗಳು ಎಸೆದ ಶಾರ್ಟ್ ಪಿಚ್ ಸ್ಲೋ ಬಾಲ್ಗಳ ಎದುರು ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಪರದಾಟ ನಡೆಸಿದ್ದರು. ಇದೀಗ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಅದೇ ಮಾದರಿ ಪೇಚಾಡಿದರು.
ನ್ಸ್ ತಂಡದ ಸ್ಟಾರ್ ಬ್ಯಾಟರ್ 14 ಎಸೆತಗಳಲ್ಲಿ ಕೇವಲ 11 ರನ್ ಮಾತ್ರವೇ ಗಳಿಸಿದರು.
ಈ ಕುರಿತಾಗಿ ಮಾತನಾಡಿದ ಅಂಬಾಟಿ ರಾಯುಡು, ಎದುರಾಳಿ ಬೌಲರ್ಗಳು ಆಫ್ಸ್ಟಂಪ್ನಿಂದ ಆಚೆಗೆ ಸ್ಲೋ ಬಾಲ್ಗಳನ್ನು ಹಾಕಿದ್ದೇ ಆದರೆ ಸೂರ್ಯಕುಮಾರ್ ಯಾದವ್ನ ಕಟ್ಟಿಹಾಕಲು ಸಾಧ್ಯ ಎಂದಿದ್ದಾರೆ. ಅಷ್ಟೇ ಅಲ್ಲದೆ 33 ವರ್ಷದ ಸ್ಟೈಲಿಷ್ ಬಲಗೈ ಬ್ಯಾಟರ್ ತಮ್ಮಲ್ಲಿನ ಈ ದೌರ್ಬಲ್ಯವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. “ಸೂರ್ಯಕುಮಾರ್ ಎದುರು ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬುದರ ಯೋಜನೆ ಈಗ ಸಿದ್ಧವಾಗಿದೆ. ಆಫ್ ಸ್ಟಂಪ್ನಿಂದ ಆಚೆಗೆ ನಿಧಾನವಾಗಿ ಬೌಲಿಂಗ್ ಮಾಡಿದರೆ ಆಯ್ತು.
ವಿಶ್ವಕಪ್ ಟೂರ್ನಿಯಲ್ಲೂ ಸೂರ್ಯಕುಮಾರ್ ಯಾದವ್ ಇದೇ ಮಾದರಿ ಪರದಾಟ ನಡೆಸಿದ್ದನ್ನು ನಾವು ನೋಡಿದ್ದೇವೆ. ಮಂದಗತಿಯ ಪಿಚ್, ಮತ್ತು ದೊಡ್ಡ ಬೌಂಡರಿಯ ಕ್ರೀಡಾಂಗಣಗಳಲ್ಲಿ ಸೂರ್ಯಕುಮಾರ್ ಯಾದವ್ನ ಕಟ್ಟಿಹಾಕಲು ಎದುರಾಳಿ ತಂಡಗಳಿಗೆ ಯೋಜನೆ ಏನಿರಬೇಕೆಂಬುದು ಗೊತ್ತಾಗಿದೆ. ಹೀಗಾಗಿ ಸೂರ್ಯಕುಮಾರ್ ತಮ್ಮ ಈ ದೌರ್ಬಲ್ಯ ಸುಧಾರಿಸಿಕೊಳ್ಳುವ ಅಗತ್ಯವಿದೆ,” ಎಂದು ಮಾಜಿ ಕ್ರಿಕೆಟಿಗ ಸಂಬಾಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.