ಲೆಬನಾನ್ ಹಾಗೂ ಸಿರಿಯಾಗಳಲ್ಲಿ ಏಕಾಏಕಿ ಪೇಜರ್ ಹಾಗೂ ವಾಕಿ ಟಾಕಿ ಸ್ಫೋಟಗಳು ಹಲವರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗೌಪ್ಯ ದಾಳಿಯ ಹಿಂದೆ ಇಸ್ರೇಲ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕವೆಂಬಂತೆ, ಸ್ಫೋಟಗಳು ಸಂಭವಿಸುತ್ತಿರುವ ಬೆನ್ನಲ್ಲೇ ಇಸ್ರೇಲ್ ರಕ್ಷಣಾ ಸಚಿವರು ಮಾರ್ಮಿಕ ಹೇಳಿಕೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಯುದ್ಧದ ಹೊಸ ಹಂತ ಆರಂಭವನ್ನು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಸೇನಾ ಪಡೆಗಳೊಂದಿಗೆ ಮಾತನಾಡುತ್ತಾ, ಇಸ್ರೇಲ್ ಸೇನೆ ಹಾಗೂ ಭದ್ರತಾ ಏಜೆನ್ಸಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯೋವ್ ಗ್ಯಾಲಂಟ್, ಎಲೆಕ್ಟ್ರಾನಿಕ್ ಉಪಕರಣಗಳ ಸ್ಫೋಟ ಪ್ರಕರಣಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ, ಫಲಿತಾಂಶಗಳು ಬಹಳ ಪ್ರಭಾವಶಾಲಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಜಾದಲ್ಲಿ ಹಮಾಸ್ ಉಗ್ರಗಾಮಿಗಳ ವಿರುದ್ಧದ ತಿಂಗಳುಗಳ ಯುದ್ಧದ ನಂತರ, “ಸಂಪನ್ಮೂಲಗಳು ಮತ್ತು ಬಲಗಳನ್ನು ತಿರುಗಿಸುವ ಮೂಲಕ ಗುರುತ್ವಾಕರ್ಷಣೆಯ ಕೇಂದ್ರ ಉತ್ತರಕ್ಕೆ ಸ್ಥಳಾಂತರಗೊಳ್ಳುತ್ತಿದೆ” ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. “ನಾವು ಯುದ್ಧದಲ್ಲಿ ಹೊಸ ಹಂತದ ಪ್ರಾರಂಭದಲ್ಲಿದ್ದೇವೆ, ಇದಕ್ಕೆ ಧೈರ್ಯ, ನಿರ್ಣಯ ಮತ್ತು ಪರಿಶ್ರಮದ ಅಗತ್ಯವಿದೆ” ಎಂದು ಅವರು ಹೇಳಿದರು.
ಏಕಾೇಕಿ ಪೇಜರ್ ಗಳು ಸ್ಫೋಟಗಳು ಸ್ಫೋಟಗೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 2800 ಜನ ಗಾಯಗೊಂಡಿದ್ದು ಅವರಲ್ಲಿ 200 ಜನರ ಸ್ಥೀತಿ ಗಂಭೀರವಾಗಿದೆ. ಮತ್ತೊಂದೆಡೆ ವಾಕಿ ಟಾಕಿ ಸ್ಫೋಟಗಳು 14 ಮಂದಿ ಮೃತಪಟ್ಟಿದ್ದು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.