ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆದಂತೆ ನೀರಿನ ದಾಹದ ಬೇಡಿಕೆ ಸಹ ಹೆಚ್ಚಳವಾಗುತ್ತಿದೆ. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಕುಡಿಯೋದಕ್ಕೆ ನೀರೇ ಸಿಗಲ್ಲ ಅನ್ನೋ ಸರ್ವೇಗಳು ಜನರ ನೆಮ್ಮದಿ ಹಾಳು ಮಾಡಿದೆ..ಹೀಗಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಬೆಂಗಳೂರು ಜಲಮಂಡಳಿ ಕಾವೇರಿ ಐದನೇ ಹಂತ ಯೋಜನೆಗೆ ಕೈ ಹಾಕಿದೆ..ಈಗಾಗಲೇ ಯೋಜನೆ ಆರಂಭವಾಗಿದ್ದು,ಮುಂದಿನ ವರ್ಷ ಏಫ್ರಿಲ್ ನಲ್ಲಿ ಬೆಂಗಳೂರಿಗೆ 10 ಟಿಎಂಸಿ ನೀರು ಹರಿದು ಬರಲಿದೆ.
ಬೆಂಗಳೂರು ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ.ನಗರ ವಿಸ್ತಾರವಾಗುತ್ತಿದ್ದಂತೆ ಜನರ ನೀರಿನ ದಾಹ ತಣ್ಣಿಸಲು ಜಲಮಂಡಳಿಗೆ ಸವಾಲು ಆಗಿದೆ. ಇದೀಗ ಕಾವೇರಿ ಒಂದು, ಎರಡು, ಮೂರು ಹಾಗೂ ನಾಲ್ಕನೇ ಹಂತಗಳ ಮೂಲಕ ಕಾವೇರಿ ನೀರು ನಗರಕ್ಕೆ ಪೂರೈಕೆ ಯಾಗುತ್ತಿದೆ.ಸದ್ಯ ಪ್ರತಿದಿನ 135 ಕೋಟಿ ಲೀಟರ್ ನೀರು ಪೂರೈಕೆ ಆಗುತ್ತಿದೆ. ಹೀಗಿದ್ದೂ ನಗರ ನಿತ್ಯ 75 ಕೋಟಿ ಲೀಟರ್ನಷ್ಟು ಕೊರತೆ ಅನುಭವಿಸುತ್ತಿದೆ. ಐದನೇ ಹಂತದ ಯೋಜನೆ ಅನುಷ್ಠಾನಕ್ಕೆ ಬಂದರೆ ನೀರಿನ ಕೊರತೆ ಸಂಪೂರ್ಣವಾಗಿ ನೀಗಲಿದೆ ಅನ್ನೋದು ಜಲಮಂಡಳಿ ಲೆಕ್ಕಚಾರವಾಗಿದ್ದು,ಮಂಡಳಿ ಐದನೇ ಹಂತ ಯೋಜನೆಗೆ ಕೈ ಹಾಕಿ, ಕಾಮಗಾರಿ ಮುಗಿಯೋ ಹಂತಕ್ಕೆ ಬಂದಿದೆ.
ನಗರಕ್ಕೆ ಕೆಆರ್ಎಸ್ ಜಲಾಶಯದಿಂದ ಹರಿದು ಬರುವ ನೀರು ಸಂಸ್ಕರಣೆಗೆ ತೊರೆಕಾಡನಹಳ್ಳಿಯಲ್ಲಿ ಹೊಸ ಘಟಕ ಸ್ಥಾಪಿಸಲಾಗುತ್ತದೆ. ಅಲ್ಲಿಂದ ಹಾರೋಹಳ್ಳಿ ಹಾಗೂ ತಾತಗುಣಿ ಪಂಪಿಂಗ್ ಸ್ಟೇಷನ್ಗಳಿಗೆ ನೀರು ಪಂಪ್ ಮಾಡಲಾಗುತ್ತದೆ.ಬೆಂಗಳೂರಿನ ವ್ಯಾಪ್ತಿಯ 110 ಹಳ್ಳಿ ಸೇರಿದಂತೆ ಇಡೀ ನಗರವನ್ನ ಗಮನದಲ್ಲಿಟ್ಟುಕೊಂಡು 2030 ಜನಸಂಖ್ಯೆ ದೃಷ್ಟಿಯಲ್ಲಿಟ್ಟುಕೊಂಡು ಐದನೇ ಹಂತ ಯೋಜನೆ ಸಿದ್ಧಪಡಿದೆ.ಇದೀಗ ಎಲ್ಲ ಪ್ರಕ್ರಿಯೆಗಳು ಅಂತ್ಯಗೊಂಡಿದ್ದು,ಕಾಮಗಾರಿಯನ್ನ ಜಲಮಂಡಳಿ ಚುರುಕು ಪಡಿಸಿದೆ.ಮುಂದಿನ ಏಫ್ರಿಲ್ನೊಳಗೆ ಕಾಮಗಾರಿ ಪೂರ್ಣಗೊಳಿಸಲು ಜಲಮಂಡಳಿ ತೀರ್ಮಾನ ಕೈಗೊಂಡಿದೆ.
ಕಾವೇರಿ ನದಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಒದಗಿಸಲು ರಾಜ್ಯ ಸಚಿವ ಸಂಪುಟ 2014ರಲ್ಲಿ ಒಪ್ಪಿಗೆ ನೀಡಿದೆ.5500ಕೋಟಿ ರೂ ವೆಚ್ಚದ ಮಹತ್ವಾಕಾಂಕ್ಷಿ ಈ ಯೋಜನೆಗೆ ಜಪಾನ್ ಸರ್ಕಾರ ಶೇ.85 ರಷ್ಟು ಸಾಲ ಒದಗಿಸಿದೆ.. ಉಳಿದ ಶೇ.15 ರಷ್ಟು ಸರ್ಕಾರ ಶೇ.7.5ರಷ್ಟು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೊತ್ತ ಭರಿಸಿದೆ.ಮುಂದಿನ ಆರಂಭದಲ್ಲೇ ಬೆಂಗಳೂರಿಗೆ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಬರಲಿದೆ ಅಂತಾರೆ ಜಲಮಂಡಳಿ ಅಧ್ಯಕ್ಷರು ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನೀರಿನ ಕೊರತೆ ನೀಗಿಸಲು ಹೆಚ್ಚುವರಿ 10 ನೀರು ಮುಂದಿನ ವರ್ಷ ಹರಿದು ಬರಲಿದೆ.ಆದ್ರೆ ಬರುವ ನೀರನ್ನು ಎಷ್ಟರ ಮಟ್ಟಿಗೆ ಸೋರಿಕೆ ಮಾಡದಂತೆ ಜಲಮಂಡಳಿ ಜನರಿಗೆ ಪೂರೈಕೆ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.