ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಸಂಚಾರ ದಟ್ಟಣೆಯೂ ಆಗುತ್ತಿದೆ. ಈ ಹಿನ್ನೆಲೆ ನಗರದಲ್ಲಿ ಸಂಚಾರ ನಿಯಮದಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತಿವೆ. ಇನ್ನು ಇದೀಗ ಹಲಸೂರು ಬಳಿಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್ಗಳಲ್ಲಿ ಅತ್ಯಾಧುನಿಕ ಜಪಾನೀಸ್ ತಂತ್ರಜ್ಞಾನ ಆಧರಿಸಿದ ಹೊಸ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಸುಗಮ ಸಂಚಾರ ನಿರ್ವಹಣೆಗಾಗಿ ಇತ್ತೀಚೆಗೆ ಬೆಂಗಳೂರಿನ ಹಲಸೂರು ಬಳಿಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್ಗಳಲ್ಲಿ ಜಪಾನೀಸ್ ತಂತ್ರಜ್ಞಾನ ಮೋಡರೇಟೊ ಆಧರಿಸಿದ ಹೊಸ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಈ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ಗಳ ಅಳವಡಿಕೆ ವಿವಿಧ ಕಾರಣಗಳಿಂದಾಗಿ ಸ್ವಲ್ಪ ವಿಳಂಬ ಆಗಿತ್ತು. ಇದೀಗ ಎಂಜಿ ರಸ್ತೆ, ಹೊಸೂರು ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿರುವ 28 ಪ್ರಮುಖ ಜಂಕ್ಷನ್ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹೊಸ ವ್ಯವಸ್ಥೆ ಪ್ರತಿ ಜಂಕ್ಷನ್ನಲ್ಲಿರುವ ವಾಹನಗಳ ದಟ್ಟಣೆಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಸಿಗ್ನಲ್ಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
ಪ್ರಸ್ತುತ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್ಗಳಲ್ಲಿ ಆರಂಭಿಕ ಪರೀಕ್ಷಾ ಉದ್ದೇಶಗಳಿಗಾಗಿ ತಾತ್ಕಾಲಿಕವಾಗಿ ಜಪಾನೀಸ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಅಧಿಕೃತ ಪರೀಕ್ಷಾ ಹಂತದ ಕಾರ್ಯಾಚರಣೆ ಆರಂಭ ಆಗಲಿದೆ. ಮಾರ್ಚ್ ವೇಳೆಗೆ ನಗರದ ಪ್ರಮುಖ ಪ್ರದೇಶಗಳ ಜಂಕ್ಷನ್ಗಳಲ್ಲಿ ಹೊಸ ತಂತ್ರಜ್ಞಾನದ ಸಿಗ್ನಲ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು .72 ಕೋಟಿ ರೂಪಾಯಿಗಳ ಈ ಸಿಗ್ನಲಿಂಗ್ ಯೋಜನೆಯನ್ನು ಜಪಾನ್ನ ನಗೋಯಾ ಎಲೆಕ್ಟ್ರಿಕ್ ವರ್ಕ್ಸ್ ಕಂಪನಿ ಲಿಮಿಟೆಡ್ ಅಳವಡಿಕೆ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಇತರ ಕೆಲವು ಕಾರಣಗಳಿಂದಾಗಿ ಯೋಜನೆ ವಿಳಂಬ ಆಗಿತ್ತು. ಈ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ (ATSCS) ಸ್ವಯಂಚಾಲಿತ ಟ್ರಾಫಿಕ್ ಕೌಂಟರ್ಗಳನ್ನು ಒಳಗೊಂಡಿದೆ.
ಇಷ್ಟೆಲ್ಲ ಒಂದೆಡೆಯಾದೆ ಖ್ಯಾತ ಸಂಚಾರ ತಜ್ಞರಾದ ಶ್ರೀನಿಧಿ ಅವರು ಇದೆಲ್ಲ ಉಪಯೋಗಕ್ಕೆ ಬರುವುದಿಲ್ಲ ಎಂದು ಆರೋಪಿಸಿದ್ದಾರೆ. . ಯಾವುದೇ ರಸ್ತೆ ಆದರೂ ಕೂಡ ರಸ್ತೆ ಬದಿಯಲ್ಲಿ ಪಾರ್ಕಿಂಗ್ ನನ್ನ ಮೊದಲು ತಡೆಗಿಟ್ಟಬೇಕು ..ಅದನ್ನ ತಡೆದರೆ ಅರ್ಥಕ್ ಅರ್ಥ ಟ್ರಾಫಿಕ್ ನ ಜಂಜಾಟ ತಪ್ಪುತ್ತದೆ ..ಅದನ್ನು ಬಿಟ್ಟು ಸುಮ್ಮನೆ ದುಡ್ಡು ವ್ಯರ್ಥ ಮಾಡಿ, ಅದು ಯಾರಿಗೂ ಕೂಡ ಉಪಯೋಗವಾಗುವಂತೆ ಇವರು ಮಾಡುತ್ತಿದ್ದಾರೆ.. ಈ ರೀತಿಯಾದಂತಹ ಪ್ರಯತ್ನ ಯಾರಿಗೂ ಪ್ರಯೋಜನ ಇಲ್ಲ ..ಅಲ್ಲಿರುವಂತಹ ತಜ್ಞರು ಯಾವುದೇ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ..
ಒಟ್ಟಿನಲ್ಲಿ ಹೇಳುವುದಾದರೆ, ಈ ಅತ್ಯಾದುನಿಕ ತಂತ್ರಜ್ಞಾನವು ಟ್ರಾಫಿಕ್ ಜಾಮ್ ತಡೆಯುವುದಲ್ಲದೆ, ಪದಚಾರಿಗಳಿಗೂ ಕೂಡ ರಸ್ತೆ ದಾಟಲು ಅನುವು ಮಾಡಿಕೊಂಡುತ್ತದಂತೆ.. ಇದು ಯಾವ ಮಟ್ಟಿಗೆ ಟ್ರಾಫಿಕ್ ತಡೆಯುತ್ತದೆ ಎಂದು ಕಾದು ನೋಡಬೇಕಿದೆ..