ಬೆಂಗಳೂರು ;- ರಾಜ್ಯದಲ್ಲಿ ಶಕ್ತಿಯೋಜನೆ ಜಾರಿ ಬಂದಿದ್ದೇ ತಡ ಸರ್ಕಾರಿ ಬಸ್ ಗಳು ತುಂಬಿ ತುಳುಕುತ್ತಿವೆ.
ಅದರಲ್ಲೂ ವೀಕೆಂಡ್ ನಲ್ಲಿ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಮಹಿಳೆಯದ್ದೇ ದರ್ಬಾರ್ ಎಂದರೆ ತಪ್ಪಾಗಲಾರದು. ಹೀಗಾಗಿ ಪ್ರತಿ ವೀಕೆಂಡ್ ನಲ್ಲಿ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಶಕ್ತಿ ಯೋಜನೆಯಲ್ಲಿ ಕೆಲ ಮಾರ್ಪಾಡು ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪ್ರತಿ ವೀಕೆಂಡ್ ನಲ್ಲಿಯೂ ನಾಲ್ಕು ಸಾರಿಗೆ ಬಸ್ ಗಳಲ್ಲಿ ಒತ್ತಡ ಹೆಚ್ಚಿದ್ದು, ಹೀಗಾಗಿ ವೀಕೆಂಡ್ ನಲ್ಲಿ ಮಹಿಳೆಯರ ಓಡಾಟಕ್ಕೆ ಶೀಘ್ರದಲ್ಲೇ ಲಗಾಮು ಬೀಳಲಿದೆ.
ತಿಂಗಳಾಂತ್ಯದೊಳಗೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರಲಿದ್ದು, ಶಕ್ತಿ ಯೋಜನೆಯಲ್ಲಿ ರೂಲ್ಸ್ ಮಾರ್ಪಾಡು ಗೆ ಸಾರಿಗೆ ನಿಗಮಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ವೀಕೆಂಡ್ ನಲ್ಲಿ ನಾಲ್ಕು ಸಾರಿಗೆ ನಿಗಮದ ಬಸ್ ಗಳ ಹೌಸ್ ಪುಲ್ ಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಬಸ್ ಗಳಲ್ಲಿ ರಷ್ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಷರತ್ತು ಹಾಕುವ ಪ್ಲ್ಯಾನ್ ರೆಡಿ ಮಾಡಿಕೊಳ್ಳುತ್ತಿದೆ.