ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಳೆದ 15 ದಿನದಲ್ಲಿ ಬರೋಬ್ಬರಿ 7 ಕೋಟಿ ಮಹಿಳೆಯರ ಪ್ರಯಾಣಿಸಿದ್ದಾರೆ.
ಶನಿವಾರ ಒಂದೇ ದಿನ 58,14,524 ಮಹಿಳಾ ಪ್ರಯಾಣಿಕರ ಓಡಾಟ, ಕೆಎಸ್ಆರ್ಟಿಸಿ ಬಸ್ನಲ್ಲಿ ಶನಿವಾರ 17,29,314 ಮಹಿಳೆಯರ ಪ್ರಯಾಣ, ಬಿಎಂಟಿಸಿ ಬಸ್ನಲ್ಲಿ ಶನಿವಾರ 18,95,144 ಮಹಿಳೆಯರ ಪ್ರಯಾಣ, ವಾಯವ್ಯ ಸಾರಿಗೆ ಬಸ್ನಲ್ಲಿ 14,01,910 ಮಹಿಳೆಯರ ಪ್ರಯಾಣ, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 7,88,156 ಮಹಿಳೆಯರ ಪ್ರಯಾಣ, ಜೂ.11ರಿಂದ ಜೂ.24ರವರೆಗೆ 7,15,58,775 ಮಹಿಳೆಯರು ಪ್ರಯಾಣ ಮಾಡಿದ್ದು 7,15,58,775 ಮಹಿಳಾ ಪ್ರಯಾಣಿಕರ ಟಿಕೆಟ್ ವೆಚ್ಚ ₹166,09,27,526 ರೂ ಆಗಿದೆ.
ವೀಕೆಂಡ್ ರಷ್ ತಡೆಯಲು ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್ ಜಾರಿ
ಹಾಗಾದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?
-ವೀಕೆಂಡ್ ನಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಳ
-KSRTCಯಲ್ಲಿ ಪುರುಷರಿಗೆ ಮೀಸಲಿಟ್ಟ ಆಸನಗಳನ್ನ ನಿರ್ವಾಹಕರು ಪುರುಷರಿಗೆ ಸಿಗುವಂತೆ ಮೇಲ್ವಿಚಾರಣೆ
-ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ಬಸ್ ಹತ್ತುವ ವ್ಯವಸ್ಥೆ..
-ವೀಕೆಂಡ್ ನಲ್ಲಿ ನಿಲ್ದಾಣಗಳಲ್ಲಿ ಪೊಲೀಸರ ನಿಯೋಜನೆ ಪ್ಲಾನ್
-ಬಸ್ ಗಳಲ್ಲಿ ಪ್ರಯಾಣಿಕರ ಮಿತಿ ಹೇರುವ ಸಾಧ್ಯತೆ
– ದೂರ ದೂರದ ಪ್ರಯಾಣಕ್ಕೆ ಮೊದಲೇ ಟಿಕೆಟ್ ಬುಕ್ ಮಾಡಬೇಕೆಂದು ಸೂಚನೆ
-ಗುಂಪು ಗುಂಪಾಗಿ ಮಹಿಳೆಯರ ಓಡಾಟಕ್ಕೆ ಕಡಿವಾಣ
ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಮಿತಿ ನಿಗದಿ
–