ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿಗೆ ಸರ್ಕಾರ ನೂತನವಾಗಿ ತಹಶೀಲ್ದಾರ್ ನೇಮಕ ಮಾಡಿ ಆದೇಶ ಹೊರಡಿಸಿದೆ. ಹಾಲಿ ತಹಶೀಲ್ದಾರ್ ಶಿವರಾಜ್ ವಯೋ ನಿವೃತ್ತಿ ಹೊಂದಿದ ಸ್ಥಾನಕ್ಕೆ ನೂತನ ತಹಶೀಲ್ದಾರ್ ಆಗಿ ಬಾಲಕೃಷ್ಣಅವರನ್ನು ನೇಮಕಗೊಂಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಹಿಸಿದ ನೂತನ ತಹಶೀಲ್ದಾರ್ ನನ್ನ ಪ್ರಮುಖ ಉದ್ದೇಶ ಬಡಜನತೆಯ ಪರವಾಗಿ ಕೆಲಸ ಮಾಡುವುದು, ಹಾಗೂ ರೈತರಿಗೆ ಸಾಗುವಳಿ ದಾರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಮಾಣಿಕವಾಗಿ ದುಡುಯುತ್ತೇನೆ.
ಸರ್ಕಾರಿ ಜಾಗಗಳನ್ನು ಗುರುತಿಸಿ ಬಡ ಜನತೆಗೆ ಆಶ್ರಯ ಯೋಜನೆಗಳ ಮೂಲಕ ನ್ಯಾಯ ಒದಗಿಸುತ್ತೇನೆಂದು ಕರ್ತವ್ಯಕ್ಕೆ ಹಾಜರ್ ಆದ ಮೊದಲನೇ ದಿನವೇ ತಹಶೀಲ್ದಾರ್ ಬಾಲಕೃಷ್ಣ ತಾಲೂಕಿನ ಜನರಿಗೆ ಆಶ್ವಾಸನೆ ನೀಡಿದರು.