ಬೆಂಗಳೂರು: 10 ಲಕ್ಷ ಕಿಲೋ.ಮೀಟರ್ ಗೆ ಸಂಚರಿಸಿ ಗುಜರಿ ಸೇರಿದ್ದ ಬಿಎಂಟಿಸಿ ಬಂಡಿಗೆ ಹೊಸ ರೂಪ ಬಂದಿದೆ. ಸಂಸ್ಥೆಯ ಮ್ಯಾಕನಿಕ್ ಗಳ ಕೈಚಳಕದಿಂದ ಭೋಜನ ಬಂಡಿಯಾಗಿ ಬದಲಾಗಿದೆ. ಈ ಬಂಡಿ ಬಿಎಂಟಿಸಿ ಸಿಬ್ಬಂದಿಯ ಹಸಿವು ನೀಗಿಸಲಿದೆ. ಈ ಮೂಲಕ ಸಿಬ್ಬಂದಿ ಬಹುದಿನದ ಬೇಡಿಕೆ ಈಡೇರಿದೆ.
ಬಿಎಂಟಿಸಿ ಬೆಂಗಳೂರಿನ ಸಂಚಾರ ಜೀವನಾಡಿ. ಸಿಲಿಕಾನ್ ಸಿಟಿಯ ಎಲ್ಲಾ ದಿಕ್ಕುಗಳಲ್ಲೂ ಸಂಚರಿಸಿ ಜನರಿಗೆ ಸೇವೆ ನೀಡ್ತಿದೆ. ಆದರೀಗ ಜನರನ್ನ ಹೊತ್ತು ಸಾಗಿ ಮೂಲೆ ಸೇರಿದ್ದ ಬಸ್ ಗೆ ಹೊಸ ರೂಪ ಬಂದಿದೆ. , ಸ್ಕ್ರಾಪ್ ಬಸ್ಸಿನಲ್ಲಿ ನೌಕರರಿಗಾಗಿ ಬಿಎಂಟಿಸಿ ಕ್ಯಾಂಟಿನ್ ನಿರ್ಮಿಸಿದೆ. 10 ಲಕ್ಷ ಕಿ.ಮೀ. ಓಡಾಟ ನಡೆಸಿದ್ದ ಬಸ್ಗಳು ಕ್ಯಾಂಟೀನ್ ಆಗಿ ಪರಿವರ್ತನೆಗೊಂಡಿವೆ. ಕ್ಯಾಂಟೀನ್ ಇಲ್ಲದಂತಹ ಘಟಕ, ಬಸ್ ನಿಲ್ದಾಣಗಳಲ್ಲಿ ತಿಂಡಿ, ಊಟ ಮಾಡಲು ಈ ಬಸ್ ಕ್ಯಾಂಟಿನ್ ಉಪಯೋಗವಾಗ್ತಾ ಇದೆ.
ಬೆಂಗಳೂರಿನಲ್ಕಿ 49 ಬಿಎಂಟಿಸಿ ಡಿಪೊಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆಗಳಲ್ಲಿ ಕ್ಯಾಂಟೀನ್ಗಳಿವೆ. ಹಲವು ಕಡೆಗಳಲ್ಲಿ ಇಲ್ಲ. ಕಾರ್ಯಾಚರಣೆ ನಿಲ್ಲಿಸಿರುವ ಬಸ್ಗಳನ್ನು ಕ್ಯಾಂಟೀನ್ಗಳನ್ನಾಗಿ ಪರಿವರ್ತಿಸಿ 17 ಡಿಪೊಗಳಲ್ಲಿ ಅಳವಡಿಸುವ ಪ್ಲಾನ್ ಮಾಡಲಾಗಿದೆ. ಇದು ಸಕ್ಸಸ್ ಆದ್ರೆ ಬಸ್ ನಿಲ್ದಾಣದಲ್ಲೂ ಮೊಬೈಲ್ ಕ್ಯಾಂಟೀನ್ ಮಾಡುವ ಅಲೋಚನೆಯಲ್ಲಿದೆ ಬಿಎಂಟಿಸಿ.
ಬೋಜನ ಬಂಡಿ ವಿಶೇಷತೆ?
1. ಬಸ್ ಒಳಗಿನ ಸೀಟ್ಗಳನ್ನು ತೆಗೆದು ಟೇಬಲ್ ಮತ್ತು ಆಸನಗ ಜೋಡಿಸಲಾಗಿದೆ
2. ಕೈತೊಳೆಯಲು ವಾಶ್ ಬೇಷನ್, ಕುಡಿಯುವ ನೀರು, ಪ್ಯಾನ್ ವ್ಯವಸ್ಥೆ
3. ಮೇಲ್ಛಾವಣಿಯಲ್ಲಿ ಗಾಜಿನ ಕಿಟಕಿಯಿಂದ ಬೆಳಕು ಬರುವ ವ್ಯವಸ್ಥೆ
4 ಬಸ್ಸಿನ ಎರಡು ಬದಿಯಲ್ಲಿ ಗಾಳಿ ಹಾಗೂ ಬೆಳಕು ಬರುವ ವ್ಯವಸ್ಥೆ
5. ಬಸ್ ಚಾವಣಿಯ ಮೇಲೆ ನೀರಿನ ಟ್ಯಾಂಕ್ ಜೋಡಿಸಲಾಗಿದೆ
6. ಹೋಟೆಲ್ಗಳಲ್ಲಿ ಇರುವ ಎಲ್ಲ ಸೌಲಭ್ಯಗಳೂ ಭೋಜನ ಬಂಡಿಯಲ್ಲಿವೆ.
ಬಿಎಂಟಿಸಿ ಸಿಬ್ಬಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ನೀಡಲು ಈ ಕ್ಯಾಂಟೀನ್ಗಳು ಸಹಕಾರಿಯಾಗಲಿವೆ. ಕ್ಯಾಂಟೀನ್ ಅನ್ನು ಬಿಎಂಟಿಸಿ ವತಿಯಿಂದಲೇ ನಡೆಸುವುದೋ ಅಥವಾ ಹೊರಗೆ ಗುತ್ತಿಗೆ ನೀಡುವ ಬಗ್ಗೆ ಶೀಘ್ರ ತೀರ್ಮಾನ ಆಗುತ್ತಂತೆ. ಒಟ್ಟಾರೆ ಗುಜರಿ ಸೇರಬೇಕಿದ್ದಾ ಬಸ್ ಸಿಬ್ಬಂದಿಗಳಿಗೆ ನೆರವಾಗ್ತಿದೆ. ಈ ಕಾರ್ಯಕ್ಕೆ ಬಿಎಂಟಿಸಿ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ