ಭಾರತೀಯರ ಪವಿತ್ರ ಹಬ್ಬವಾಗಿರುವ ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್ ನಗರದಲ್ಲಿ ಶಾಲೆಗಳಿಗೆ ರಜೆ ಘೊಷಿಸುವ ಮೂಲಕ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿಂದೆ 2021 ಮತ್ತು 2022ರಲ್ಲಿ ಎರಡು ಬಾರಿ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಿದ್ದರು, ಎರಡು ಮಸೂದೆಯು ವಿಫಲವಾಗಿತ್ತು. ಈ ಮಸೂದೆಯನ್ನು ವಿಧಾನಸಭೆಯ ಸದಸ್ಯೆ ಜೆನಿಫರ್ ರಾಜ್ಕುಮಾರ್ ಮಂಡಿಸಿ, ಮಸೂದೆ ಅಂಗೀಕಾರವಾದಾಗ ದಕ್ಷಿಣ ಏಷ್ಯಾದ ಸಮುದಾಯದ ಕನಸನ್ನು ನನಸು ಮಾಡಿದೆ ಎಂದು ಹೇಳಿದ್ದರು.
ನ್ಯೂಯಾರ್ಕ್ನಲ್ಲಿ ಹಿಂದೂಗಳ ಹಬ್ಬಕ್ಕೆ ಶಾಲೆಗಳಿಗೆ ರಜೆ ಘೋಷಿಸಿರುವುದು ಖುಷಿಯಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡವ್ಸ್ ಹೇಳಿಕೆ ನೀಡಿದ್ದು, ಎಲ್ಲಾ ಸದಸ್ಯರ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಭಾರತೀಯ ಸಮುದಾಯ ಸೇರಿದಂತೆ ನಗರದ ನಿವಾಸಿಗಳಿಗೆ ಇದು ವಿಜಯ ಎಂದು ಅಧಿಕಾರಿಗಳು ಬಣ್ಣಿಸಿದರು. ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಅವರು ಸ್ಟೇಟ್ ಹೌಸ್ ಮತ್ತು ಸ್ಟೇಟ್ ಸೆನೆಟ್ ನ್ಯೂಯಾರ್ಕ್ ಸಿಟಿ ಪಬ್ಲಿಕ್ ಶಾಲೆಗಳನ್ನು ದೀಪಾವಳಿಯಂದು ಮುಚ್ಚಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ನ್ಯೂಯಾರ್ಕ್ನಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಘೊಷಿಸಬೇಕು ಎನ್ನುವ ಒತ್ತಾಯವಿತ್ತು. ವೈಟ್ ಹೌಸ್ ನಲ್ಲೂ ಈ ಹಿಂದೆ ದೀಪಾವಳಿ ಆಚರಿಸಲಾಗಿತ್ತ. ಕತ್ತಲೆ ಮೇಲೆ ಬೆಳಕಿನ ವಿಜಯದ ಸಂಕೇತ ದೀಪಾವಳಿ ಎಂದು ಮೇಯರ್ ಟ್ವೀಟ್ ಮಾಡಿದ್ದಾರೆ. ಇದೀಗ ದೀಪಾವಳಿಗೆ ಶಾಲೆಗಳೀಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳಿಗೆ ಈ ವರ್ಷ ದೀಪಾವಳಿ ರಜೆ ಇರುತ್ತದೆ. ನ್ಯೂಯಾರ್ಕ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯೆ ಜೆನ್ನಿಫರ್ ರಾಜ್ಕುಮಾರ್ ಮಾತನಾಡಿ, ಎರಡು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಏಷ್ಯಾ ಮತ್ತು ಇಂಡೋ-ಕೆರಿಬಿಯನ್ ಸಮುದಾಯವು ಈ ಕ್ಷಣಕ್ಕಾಗಿ ಹೋರಾಡಿದೆ ಎಂದಿದ್ದಾರೆ.