ನವದೆಹಲಿ: ಇಸ್ರೋದ ಚಂದ್ರಯಾನ ಯೋಜನೆಯ ಬಳಿಕ ಸಂಸ್ಥೆಯು ಸೂರ್ಯ ಹಾಗೂ ಶುಕ್ರ ಗ್ರಹದತ್ತ ತೆರಳಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಚಂದ್ರಯಾನ್-3 ಯಶಸ್ಸನ್ನು ದೇಶವಷ್ಟೇ ಅಲ್ಲ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಇದು ನಮ್ಮ ದೇಶದ ಮತ್ತು ನಮ್ಮ ಯುವಕರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
‘ಪ್ರಧಾನಿ ಮೋದಿ ಅವರು 8 ವರ್ಷಗಳಲ್ಲಿ ಸಾಧಿಸಿರುವುದು ಹಿಂದಿನ 60 ವರ್ಷಗಳಲ್ಲಿ ಮಾಡಿರಲು ಸಾಧ್ಯವಿಲ್ಲ. ಬಹುಕಾಲ ಚಾಲ್ತಿಯಲ್ಲಿದ್ದ ರಾಜವಂಶ ಮತ್ತು ತುಷ್ಟೀಕರಣ ರಾಜಕಾರಣದ ಕಪಿಮುಷ್ಠಿಯಿಂದ ದೇಶವನ್ನು ಮೋದಿ ಹೊರತಂದು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಿದರು. ಚಂದ್ರನ ಮೇಲೆ ಭಾರತ ಈಗ ತಮ್ಮ ಮುದ್ರೆ ಒತ್ತಿದೆ. ಮುಂದೆ ಸೂರ್ಯ ಹಾಗೂ ಶುಕ್ರನ ಕಡೆ ಇಸ್ರೋ ಗಮನ ಹರಿಸಲಿದೆ ಎಂದರು.