ಮುಂದೆ JDS ಇರುತ್ತೆ ಎಂಬುದೇ ಅನುಮಾನ ಎಂದು ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮುಂದೆ JDS ಇರುತ್ತೆ ಎಂಬುದೇ ಅನುಮಾನ. ಬಿಜೆಪಿ ಏನು ಅಂತ ಮುಂದೆ ಜೆಡಿಎಸ್ಗೆ ಗೊತ್ತಗುತ್ತೆ.
ಬಿಜೆಪಿಯವರು ಹಾಗೇ ಅಡ್ಡಡ್ಡ ಎಳೆದು ಜೆಡಿಎಸ್ನವರನ್ನು ನೇತಾಕ್ತಾರೆ. ಹಂಗಂಗೆ ಗುಳುಂ.. ಗುಳುಂ ಅಂತ ಬಿಜೆಪಿಯವರು ನುಂಗಿ ಹಾಕ್ತಾರೆ ಎಂದು ಲೇವಡಿ ಮಾಡಿದ್ದರು.
ಬಿಜೆಪಿಗೆ ಜೆಡಿಎಸ್ನ ಕುಮಾರಣ್ಣ ಸರೆಂಡರ್ ಮಾಡಿಬಿಟ್ಟವ್ರೆ.ಯಾಕೆ ಕುಮಾರಣ್ಣ ಹಾಗೆ ಮಾಡಿದ್ರೋ ಗೊತ್ತಾಗ್ತಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ ಗೆ 9 ಸೀಟು ಬಿಟ್ಟು ಕೊಟ್ಟಿದ್ವಿ.ಈಗ ನೋಡಿದ್ರೆ ಜೆಡಿಎಸ್ಗೆ ಬರೀ 3 ಸೀಟು ಕೊಟ್ಟವ್ರೆ. ಮೂರು ಕಡೆ ಅವರೇ, ಮೊಮ್ಮಗ, ಮಗ, ಅಳಿಯನೇ ಕ್ಯಾಂಡಿಡೇಟು ಅಂತಾ ಹೇಳಿ ವ್ಯಂಗ್ಯ ಮಾಡಿದ್ದರು.