ಅವರಿಬ್ಬರು ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು.ಮುದ್ದಾದ ಮೂರು ಪುಟಾಣಿ ಹೆಣ್ಣು ಮಕ್ಕಳು ಸಹ ಇದ್ರು.ದುಶ್ಚಟಕ್ಕೆ ಬಿದ್ದ ಪತಿ ಪ್ರತಿದಿನ ಪತ್ನಿ ಹಾಗೂ ಮಕ್ಕಳಿಗೆ ಪ್ರತಿಕ್ಷಣ ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿದ್ದ.ಹೆಂಡತಿ ಮಕ್ಕಳು ಬೇಕು ಎಂದು ನಟಿಸಿ ಪತ್ನಿಯ ಮನೆಗೆ ಬಂದು ಇದೀಗ ತನ್ನ ಸ್ವಂತ ಪುಟಾಣಿ ಕಂದಮನನ್ನೇ ಸಾವಿನ ಮನೆಗೆ ಕಳುಹಿಸಿದ್ದಾನೆ.ಆ ಮನಮಿಡಿಯುವ ಹೃದ್ರಾವಕ ಘಟನೆಯನ್ನು ತೋರಿಸ್ತೀವಿ ನೋಡಿ.! ಮುಗಿಲು ಮುಟ್ಟಿದ ತಾಯಿ ಹಾಗೂ ಗ್ರಾಮಸ್ಥರ ಆಕ್ರಂದನ,ಏನಾಗ್ತಿದೆ ಅಂತ ಅರಿಯದೆ ಆಟವಾಡ್ತಿರುವ ಎರಡು ಪುಟಾಣಿ ಮಕ್ಕಳು,ನಿರ್ಜನ ಪ್ರದೇಶದಲ್ಲಿ ಸತ್ತು ಬಿದ್ದಿರುವ ಎರಡು ವರ್ಷ ವಯಸ್ಸಿನ ಮಗು.ಎಂತಹವರ ಕಣ್ಣಾಲಿಗಳು ಒದ್ದೆಯಾಗುವ ದೃಶ್ಯಗಳು ಕಂಡುಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ.
ಕೇವಲ ಒಂದೇ ಕಿಮೀ ದೂರದಲ್ಲಿರುವ ಆಂಧ್ರದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ನಡಿಬಾರದು ಘಟನೆಯೊಂದು ನಡೆದು ಹೋಗಿದೆ,ಈ ಫೋಟೋದಲ್ಲಿ ಕಿರಾತಕನಂತೆ ಫೋಸ್ ಕೊಡ್ತಿರುವ ಇವನ ಹೆಸರು ಗಂಗಾಧರ ಅಂತಾ 30 ವರ್ಷ,ಇವನು ಮಾಡಿರುವ ನೀಚ ಕೆಲಸಕ್ಕೆ ಇವತ್ತು ಇಡೀ ಕುಟುಂಬವೇ ಕಣ್ಣೀರಿನ ಕೈ ತೊಳೆಯುವಂತೆ ಮಾಡಿದೆ.ಹೌದು ಕೂಲಿ ಕೆಲಸಕ್ಕೆ ಹೋಗುವ ಗಂಗಾಧರ ಸದಾ ಎಣ್ಣೆ ಮತ್ತಿನಲ್ಲಿ ಇರುವ ವ್ಯಕ್ತಿ,25 ವಯಸ್ಸಿನ ತನ್ನ ಪತ್ನಿ ರೇಣುಕಾ ಹಾಗೂ ಮೂವರು ಮಕ್ಕಳನ್ನು ಇಡ್ಕೊಂಡು ಹೊಡಿಯೋದು ಇವನ ಕಾಯಕ.ಇವನ ಟಾರ್ಚರ್ ತಾಳಲಾರದೆ ತನ್ನ ಮೂರು ಮಕ್ಳಳನ್ನು ಕರೆದುಕೊಂಡು ಇದೆ ಗ್ರಾಮದಲ್ಲಿರುವ ತನ್ನ ತವರು ಮನೆಗೆ ಏಳು ತಿಂಗಳ ಹಿಂದೆ ರೇಣುಕಾ ಬಂದಿದ್ದಾಳೆ,
ಅಣ್ಣ ಆಸೆರೆಯಲ್ಲಿದ್ದು ಕೂಲಿ ಕೆಲಸಕ್ಕೂ ಹೋಗುತ್ತ ತನ್ನ ಮಕ್ಕಳನ್ನು ಸಾಕುತ್ತಿದ್ದಳು.ಆದ್ರೆ ಗಂಗಾಧರನಿಗೆ ಅದೇನಾಯ್ತೋ ಗೊತ್ತಿಲ್ಲ ಭಾನುವಾರ ನಡೆದ ಏಕಾಏಕಿ ರೇಣುಕಾಳ ಅಣ್ಣನ ಮನೆಗೆ ಬಂದು ನಾನು ಇನ್ಮುಂದೆ ಕುಡಿಯೋದಿಲ್ಲ ನನ್ನ ಹೆಂಡ್ತಿ ಮಕ್ಕಳನ್ನು ಮನೆಗೆ ಕಳುಹಿಸಿ ಎಂದು ಗೋಗರೆದಿದ್ದಾನೆ.ಇವನ ನಾಟಕವನ್ನು ನಂಬದ ರೇಣುಕಾಳ ಅಣ್ಣ ನೀನು ಯಾರಾದ್ರೂ ದೊಡ್ಡವರನ್ನು ಕರೆದುಕೊಂಡು ಬಂದು ಪಂಚಾಯ್ತಿ ಮಾಡಿ ಹೆಂಡ್ತಿ ಮಕ್ಕಳನ್ನು ಕರೆದುಕೊಂಡು ಹೋಗು ಅಂತ ಹೇಳಿದ್ದಾನೆ.ಆಯ್ತು ಅಂತ ಹೋದವನು ಇದ್ದಕಿದ್ದಂತೆ ರೇಣುಕಾಳ ಅಣ್ಣನ ಮನೆಗೆ ಸಂಜೆ 5 ಗಂಟೆ ಸುಮಾರಿಗೆ ಬಂದು ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಎರಡನೇ ಮಗಳು ಅಕ್ಷಿತಾ ಹಾಗೂ ಮೂರನೇ ಮಗು ರಮ್ಯಾಳನ್ನು ಕರೆದುಕೊಂಡು ಅಂಗಡಿಗೆ ಹೋಗಿದ್ದಾನೆ,
ಅಂಗಡಿಯ ಬಳಿ ಹೋಗ್ತಿದಂತೆ ಅಕ್ಷಿತಾಳಿಗೆ ಹೊಡೆಯಲು ಆರಂಭಿಸಿದ್ದಾನೆ,ಭಯಗೊಂಡು ಆಕೆ ಮನೆಗೆ ಓಡಿ ಬಂದಿದ್ದಾಳೆ. ಬಳಿಕ ರಮ್ಯಾಳನ್ನು ಗ್ರಾಮದ ಹೊರಹೊಲಯದಲ್ಲಿರುವ ತನ್ನ ಜಮೀನಿನ ಬಳಿ ಕರೆದುಕೊಂಡು ಹೋಗಿ ಮಗುವನ್ನು ಸಾಯಿಸಿ,ಏನೂ ತಿಳಿದವನಂತೆ ಗ್ರಾಮಕ್ಕೆ ವಾಪಸ್ಸು ಬಂದಿದ್ದಾನೆ. ಮಗು ಕಾಣಿಸಿ ಹೆಚ್ಚಿನ ಸಮಯವಾಯ್ತು ಅಂತ ಮನೆಯವರು ವಿಚಾರಿಸಿದಾಗ ಜಮೀನಲ್ಲಿರುವ ಬಾವಿಯ ಪಕ್ಕದಲ್ಲಿ ಮಗು ರಮ್ಯಾಳ ಶವ ಪತ್ತೆಯಾಗಿದೆ.ವಿಷಯ ಗ್ರಾಮದಲ್ಲಿ ತಿಳಿಯುತ್ತಿದಂತೆ ಪಾಪಿ ಗಂಗಾಧರ ತಲೆಮರಿಸಿಕೊಂಡಿದ್ದು,ನಂಗಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಲೆ ಬೀಸಿದ್ದಾರೆ.ಇತ್ತ ತಾಯಿ ರೇಣುಕಾ ಹಾಗೂ ಕುಟುಂಬಸ್ಧರ ಆಕ್ರಂದನ ಮುಗಿಲು ಮುಟ್ಟಿದೆ.