ಬೆಂಗಳೂರು ;- ಜುಲೈ 1ರಿಂದ ಅನ್ವಯವಾಗುವಂತೆ ಬೆಂಗಳೂರಿನ ನೈಸ್ ರೋಡ್ ಸಂಚಾರಕ್ಕೆ ಟೋಲ್ ಹೆಚ್ಚಳವಾಗಲಿದೆ.
ರಾಜ್ಯ ಸರ್ಕಾರ ಮತ್ತು ನಂದಿ ಎಕಾನಮಿಕ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ ನಡುವೆ ನಡೆದ 2000ದಲ್ಲಿ ನಡೆದ ಒಪ್ಪಂದದ ಪ್ರಕಾರ ಈ ಹೆಚ್ಚಳ ನಡೆದಿದೆ. ಈ ಹಿಂದೆ 2022ರ ಜೂನ್ನಲ್ಲಿ ಟೋಲ್ ದರವನ್ನು ಶೇ 17ರಷ್ಟು ಹೆಚ್ಚಿಸಲಾಗಿತ್ತು.
ಹೆಸರಿಗೆ ಇದು ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ಆಗಿದ್ದರೂ ಅದು ಸುತ್ತುವರಿದಿರುವುದು ಬೆಂಗಳೂರನ್ನು ಮಾತ್ರ. ನೈಸ್ ರಸ್ತೆಯು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ನಿಂದ ನಿರ್ಮಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಖಾಸಗಿ ಎಕ್ಸ್ಪ್ರೆಸ್ ವೇ ಆಗಿದೆ. ಆರು ಪಥಗಳ ಖಾಸಗಿ ಎಕ್ಸ್ಪ್ರೆಸ್ ವೇ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ. ಏಳು ರಸ್ತೆಗಳ ಒಟ್ಟಾರೆ ಉದ್ದ 50 ಕಿಲೋಮೀಟರ್ ಇದೆ.
ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆ ಮಾರ್ಗಗಳಲ್ಲಿ ನೈಸ್ ರಸ್ತೆಯನ್ನು ಆಗಾಗ್ಗೆ ಬಳಸುವ ಪ್ರಯಾಣಿಕರು ಶನಿವಾರದಿಂದ ಹೆಚ್ಚುವರಿ ದರ ತೆರಬೇಕಾಗುತ್ತದೆ.
ಯಾವುದಕ್ಕೆ ಎಷ್ಟು ಹೆಚ್ಚಳವಾಗಿದೆ?
ಕಾರುಗಳು: 5 ರೂ.ನಿಂದ 10 ರೂ.
ಬಸ್: 20 ರೂ.
ಟ್ರಕ್: 5 ರೂ.ನಿಂದ 15 ರೂ.
ಲಘು ವಾಣಿಜ್ಯ ವಾಹನ (LMV): 5 ರಿಂದ 10 ರೂ.
ದ್ವಿಚಕ್ರ ವಾಹನಗಳು: 2 ರೂ.ನಿಂದ 5 ರೂ