ಉಡುಪಿ: ಉಡುಪಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೂಡ ನಿಡಂಬೂರು ದೈವಸ್ಥಾನ (Muda Nidambur Deity) ಜಲಾವೃತವಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಿದ್ದ ಭಾರಿ ಮಳೆಗೆ(Karnataka Monsson) ಅಗಾಧ ಪ್ರಮಾಣದ ನೀರು, ನದಿಯಲ್ಲಿ ಉಡುಪಿಯತ್ತ ಹರಿಯುತ್ತಿದೆ. ಬನ್ನಂಜೆ ಸಮೀಪದ ಮೂಡ ನಿಡಂಬೂರು ಬ್ರಹ್ಮ ಬೈದರ್ಕಳ ಗರಡಿ ಪ್ರಾಂಗಣ ನೀರಿನಿಂದ ತುಂಬಿಕೊಂಡಿದೆ.
ಅರ್ಚಕರು ಬೆಳಗ್ಗೆ ನೆರೆ ನೀರಲ್ಲಿ ಬಂದು ಪೂಜೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಆರೆಂಜ್ ಅಲರ್ಟ್ ವಿಸ್ತರಿಸಲಾಗಿದೆ. ಮಳೆ, ನೆರೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ಜವಾಬ್ದಾರಿಯನ್ನು ತಹಶೀಲ್ದಾರ್ ಮತ್ತು ಬಿಇಒ ಗೆ ಡಿಸಿ ಕೊಟ್ಟಿದ್ದಾರೆ. ಟೋಲ್ ಫ್ರೀ ನಂಬರ್ ಕೊಟ್ಟು ,ನೆರೆಪೀಡಿತ ಪ್ರದೇಶದ ಜನರು ಎಚ್ಚರಿಕೆಯಿಂದ ಇರಿ ಎಂದು ಜಿಲ್ಲಾಡಳಿತ ಸಂದೇಶ ರವಾನಿಸಿದೆ.