ಮೆಗಾಸ್ಟಾರ್ ಚಿರಂಜೀವಿ ಅವರ ಮನೆ ಮಗಳು ನಿಹಾರಿಕಾ ಕೊನೆಡೇಲಾ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಯ ಬದುಕಿನ ಕುರಿತಾಗೆ ಸಾಕಷ್ಟು ಸದ್ದು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಪತಿ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಿಹಾರಿಕಾ ಇದೀಗ ತಮ್ಮ ಹೇಳಿಕೆಯ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಡಿವೋರ್ಸ್ ಆದ 7 ತಿಂಗಳಲ್ಲೇ ನನಗೆ ಮದುವೆ ಬೇಡ ಮಗು ಬೇಕು ಎಂಬ ಹೇಳಿಕೆ ನೀಡಿದ್ದಾರೆ.
ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಜೊನ್ನಲಗುಡ್ಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ಕೂಡ ನಡೆದಿತ್ತು. ನಿಹಾರಿಕಾ ಹಾಗೂ ಚೈತನ್ಯ ಮದುವೆಗೆ ಇಡೀ ಮೆಗಾಸ್ಟರ್ ಕುಟುಂಬ ಸಾಕ್ಷಿಯಾಗಿತ್ತು. ಆದರೆ ಮದುವೆಯಾದ ಎರಡೂವರೆ ವರ್ಷಕ್ಕೆ ಇಬ್ಬರು ದೂರು ದೂರವಾದರು.
ಸದ್ಯ ಏಕಾಂಗಿಯಾಗಿ ಲೈಫ್ ಲೀಡ್ ಮಾಡುತ್ತಿರೋ ನಿಹಾರಿಕಾ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಎರಡನೇ ಮದುವೆಯ ಕುರಿತಾಗಿ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಸ್ಟಾರ್ ನಟನನ್ನು ನಿಹಾರಿಕಾ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಹೆಸರು ರಿವೀಲ್ ಆಗಲಿಲ್ಲ. ತೆಲುಗಿನ ನಟ ವರುಣ್ ಅವರನ್ನು ನಿಹಾರಿಕಾ ಕೊನಿಡೆಲಾ 2ನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅದರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಹೊರ ಬಿದ್ದಿಲ್ಲ.
ಇದೀಗ ಎರಡನೆಯ ಮದುವೆಯ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಸಿನಿಮಾವೊಂದರ ಪ್ರಚಾರದ ಭಾಗವಾಗಿ ಆಕೆ ಮಾತನಾಡುವ ಸಂದರ್ಭದಲ್ಲಿ ನೀಡಿರುವ ಹೇಳಿಕೆಗಳು ಈಗ ವೈರಲ್ ಆಗುತ್ತಿವೆ. ಇತ್ತೀಚೆಗೆ ನಿರ್ಮಾಣಕ್ಕೆ ಕಾಲಿಟ್ಟಿರುವ ನಿಹಾರಿಕಾ ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಎಂಬ ಬ್ಯಾನರ್ ಸ್ಥಾಪಿಸಿದ್ದಾರೆ. ಈ ಬ್ಯಾನರ್ನಲ್ಲಿ ಒಟಿಟಿ ವೆಬ್ ಸೀರೀಸ್ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಯ ಜೀವನದ ಕುರಿತು ಮಾತನಾಡುವ ಸಮಯದಲ್ಲಿ ಎರಡನೆಯ ಮದುವೆಯ ಹಿಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಿಹಾರಿಕಾ ಹೇಳಿದ್ದೇನೆಂದರೆ, ಎಲ್ಲರೂ ಕೇಳುತ್ತಾರೆ ವಿಚ್ಛೇದನಕ್ಕೆ ಏನು ಕಾರಣ, ಒಂದು ಕಾರಣ ನೀಡು ಎಂದೆಲ್ಲ ಹೇಳುತ್ತಾರೆ. ಆದರೆ ವಿಚ್ಛೇದನಕ್ಕೆ ಒಂದು ಕಾರಣ ಇರಲಿಲ್ಲ. ಬದಲಿಗೆ ಹಲವಾರು ಕಾರಣಗಳಿದ್ದವು. ಅದನ್ನೆಲ್ಲ ವಿವರಿಸುವುದು ತುಸು ಕಷ್ಟ ಎಂದಿದ್ದಾರೆ.
ಇದೇ ವೇಳೆ ‘ನನಗೆ ಮಕ್ಕಳೆಂದರೆ ಇಷ್ಟ, ನಾನು ಮಕ್ಕಳನ್ನು ಹೊಂದಬೇಕು ಎಂಬ ಆಸೆ ಇದೆ. ಅದಕ್ಕಾಗಿ ನಾನು ಮದುವೆಯಾಗಬೇಕು, ಆದರೆ ಅದೊಂದೇ ಕಾರಣಕ್ಕೆ ಮದುವೆ ಆಗುವುದು ಸರಿಯಲ್ಲ ಎನಿಸುತ್ತದೆ’ ಎಂದು ಹೇಳಿದ್ದಾರೆ.