ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ನಿಂದ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಗೆ ಟಿಕೆಟ್ ನೀಡಲಾಗಿದೆ. ಇದೀಗ ಯೋಗೇಶ್ವರು ಮಗಳು ನಿಶಾ ಯೋಗೇಶ್ವರ್ ತಂದೆಯ ವಿರುದ್ಧವೆ ಸಿಡಿದೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಂದೆ ವಿರುದ್ಧವೇ ನಿಶಾ ಪೋಸ್ಟ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಿಶಾ ಯೋಗೇಶರ್ ತಂದೆಯಂತೆ ತಾನು ಕೂಡ ಸಿನಿಮಾ ರಂಗಕ್ಕೆ ಕಾಲಿಡಲು ಬಯಸಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲವಂತೆ.
ಸಿಪಿ ಯೋಗೇಶ್ವರ್ ಅವರು ‘ಸೈನಿಕ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು’, ‘ಬದ್ರಿ’, ‘ಕಂಬಾಲಹಳ್ಳಿ’, ‘ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದಿದ್ದರು. ಅವರ ಕೊನೆಯ ಸಿನಿಮಾ ‘ಅಟ್ಟಹಾಸ’. ಈ ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ಮಾಡಿದ್ದರು. ವೀರಪ್ಪನ್ ಜೀವನ ಆಧರಿಸಿ ಸಿನಿಮಾ ಮಾಡಲಾಗಿತ್ತು. ಯೋಗೇಶ್ವರ್ ಅವರು ಸಿನಿಮಾಗಳಲ್ಲಿ ನಟಿಸಿದ್ದನ್ನು ನೋಡಿ ನಿಶಾ ಸಾಕಷ್ಟು ಪ್ರಭಾವಕ್ಕೆ ಒಳಗಾಗಿ ತಾನು ಕೂಡ ಸಿನಿಮಾದಲ್ಲಿ ನಟಿಸಬೇಕು ಎಂದುಕೊಂಡಿದ್ದರು.
‘ನನ್ನ ತಂದೆ ಶೂಟ್ಗೆ ಹೋಗೋದನ್ನು ನಾನು ಬಾಲ್ಯದಲ್ಲಿ ನೋಡುತ್ತಿದ್ದೆ. ಆದರೆ, ನಾನು ಎಂದಿಗೂ ಸಿನಿಮಾ ಸೆಟ್ಗೆ ಹೋಗಿಲ್ಲ. ನಾನು ನಾಚಿಕೆ ಸ್ವಭಾವದವಳು’ ಎಂದಿದ್ದದ್ದಾರೆ ನಿಶಾ. ನಿಶಾ ಅವರು ಕಾಲೇಜಿಗೆ ಹೋಗುವ ಸಂದರ್ಭದಲ್ಲೇ ತೆಲುಗು ಹಾಗೂ ಕನ್ನಡ ಸಿನಿಮಾಗಳಿಂದ ಆಫರ್ಗಳು ಬಂದಿದ್ದವು. ಆದರೆ, ಅದನ್ನು ರಿಜೆಕ್ಟ್ ಮಾಡಿ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದರು.
ಓದು ಮುಗಿಸಿ ಭಾರತಕ್ಕೆ ಮರಳಿದ ನಿಶಾ ಅವರು 2013ರ ಸಮಯದಲ್ಲಿ ಚಿತ್ರರಂಗಕ್ಕೆ ಬರಬೇಕು ಎಂದು ಪ್ರಯತ್ನಿಸಿದರು. ಆಗ ಅವರು ದರ್ಶನ್ ನಟನೆಯ ‘ಅಂಬರೀಷ’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಈ ಚಿತ್ರದ ಮುಹೂರ್ತ ಕೂಡ ನಡೆದಿತ್ತು. ಈ ವೇಳೆ ನಿಶಾ ಕಾಲಿಗೆ ಪೆಟ್ಟಾಗಿ 2 ತಿಂಗಳು ವಿಶ್ರಾಂತಿ ಪಡೆಯಬೇಕಾಗಿ ಬಂತು. ಆದರೆ, ತಂಡದವರು ಎರಡು ತಿಂಗಳು ಕಾಯೋ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ಅವರು ಸಿನಿಮಾದಿಂದ ಹೊರ ಬಂದರು.
ಈ ಬಗ್ಗೆ ಮಾತನಾಡಿದ್ದ ನಿಶಾ, ‘ನನ್ನನ್ನು ಈ ಸಿನಿಮಾದಿಂದ ಹೊರಗೆ ಇಟ್ಟಿದ್ದಕ್ಕೆ ಯಾವುದೇ ಬೇಸರ ಇಲ್ಲ’ ಎಂದಿದ್ದರು. ನಂತರ ತೆಲುಗು ಸಿನಿಮಾ ರಂಗಕ್ಕೆ ಕಾಲಿಡಲೂ ನಿಶಾ ಪ್ರಯತ್ನಿಸಿದ್ದರು. ಅವರು ‘ಶ್ರೀರಾಮರಕ್ಷ’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ರಂಜಿತ್ ಮೆನನ್ ಜೊತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಕೂಡ ರಿಲೀಸ್ ಆಗಿಲ್ಲ. ನಿಶಾಗೆ ಬಾಲಿವುಡ್ಗೆ ಕಾಲಿಡಬೇಕು ಎಂಬ ಆಸೆಯೂ ಇತ್ತು. ಆದರೆ ಆ ಆಸೆಯೂ ಇಡೇರಲಿಲ್ಲ. ಸದ್ಯ ನಿಶಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.