ಸರ್ಕಾರದಲ್ಲಿ ಮೂವರನ್ನ ಡಿಸಿಎಂ ಮಾಡ್ಬೇಕು ಅನ್ನೋ ಹೇಳಿಕೆಗಳಿಗೆ ಬ್ರೇಕ್ ಬೀಳ್ತಿಲ್ಲ.ಇರುವ ಒಂದು ಡಿಸಿಎಂ ಹುದ್ದೆಯ ಜೊತೆಗೆ ಮತ್ತೆ ಮೂರು ಮಾಡ್ಬೇಕು ಅನ್ನೋ ಸ್ಟೇಟ್ ಮೆಂಟ್ ಗಳು ಹೆಚ್ಚಾಗ್ತಾನೇ ಇದೆ.ಈ ವಿಚಾರದಲ್ಲಿ ಸ್ವಪಕ್ಷೀಯ ನಾಯಕರ ಸ್ಟೇಟ್ ಮೆಂಟ್ ಗಳೇ ಸರ್ಕಾರಕ್ಕೆ ಮುಜುಗರ ತಂದಿಡ್ತಿವೆ.ಮತ್ತೊಂದು ಕಡೆ ಮೂರೇಕೆ..?
10 ಜನರನ್ನ ಡಿಸಿಎಂ ಮಾಡಿ ಎಂದು ಡಿಕೆಶಿ ಟೀಂ ವ್ಯಂಗ್ಯ ಮಾಡಿದೆ.
ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನ ಸೃಷ್ಟಿ ಮಾಡಬೇಕೆಂಬ ಅನ್ನೋ ಚರ್ಚೆ ಮೊದಲಿನಿಂದ್ಲೂ ಕೇಳಿ ಬರ್ತಿದೆ. ಲೋಕಸಬಾಚುನಾವಣೆಯ ಮುನ್ನವೂ ದೊಡ್ಡ ಮಟ್ಟದಲ್ಲೇ ಚರ್ಚೆಗೆ ಬಂದಿತ್ತು.ಅದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು.ಈ ವಿಚಾರದಲ್ಲಿ ಹೇಳಿಕೆ ನೀಡ್ತಿದ್ದವರ ಬಾಯಿ ಮುಚ್ಚಿಸಿತ್ತು.
ಈಗ ಚುನಾವಣೆ ಮುಗಿದಿದ್ದು ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ.ಸಚಿವ ಕೆ.ಎನ್.ರಾಜಣ್ಣ ಸ್ಟೇಟ್ ಮೆಂಟ್ ನಂತರ ನಾಯಕರ ಹೇಳಿಕೆಗಳು ಹೆಚ್ಚಾಗ್ತಿವೆ.ಈ ವಿಚಾರದ ಬಗ್ಗೆ ಪ್ರತಿನಿತ್ಯ ಸಚಿವರು ಸ್ಟೇಟ್ ಮೆಂಟ್ ಕೊಡ್ತಾನೆ ಇದ್ದಾರೆ.ಇದಕ್ಕೆ ಬ್ರೇಕ್ ಹಾಕಬೇಕಾದ ಸಿಎಂ ಹಾಗೂ ಡಿಸಿಎಂ ಕೈಕಟ್ಟಿಕುಳಿತಿದ್ದಾರೆ..ಅತ್ತ ಹೈಕಮಾಂಡ್ ಕೂಡ ಸೈಲೆಂಟಾಗಿಬಿಟ್ಟಿದೆ..ಇದ್ರಿಂದ ರಾಜ್ಯದಲ್ಲಿ ಸರ್ಕಾರಕ್ಕೆ ಮತ್ತೆ ಡ್ಯಾಮೇಜ್ ಶುರುವಾಗಿದೆ.
ಕೆಲವು ನಾಯಕರು ಡಿಸಿಎಂ ವಿಚಾರದ ಬಗ್ಗೆ ಮಾತನಾಡಿದ್ರು.ಇವತ್ತು ಇನ್ನು ಕೆಲವು ಸಚಿವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.ಹೆಚ್ಚುವರಿ ಡಿಸಿಎಂ ಹುದ್ದೆಗಳು ಬೇಕು ಅನ್ನೋದು ಇದೆ.ಆದ್ರೆ ಅದನ್ನ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಬೇಕು ಅಂತ ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ..ನಾನು ಡಿಸಿಎಂ ಆಕಾಂಕ್ಷಿಯಲ್ಲ ಅಂದಿದ್ದಾರೆ. ನನಗೆ ಜವಾಬ್ದಾರಿ ಕೊಟ್ರೆ ನಿಭಾಯಿಸೋಕೆಸಿದ್ದ ಅಂತಿದ್ದಾರೆ. ಇನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಹೈಕಮಾಂಡ್ ನಿರ್ಧಾರಕ್ಕೆಬಿಟ್ಟಿದ್ದು ಅಂದಿದ್ದಾರೆ..ಇದೇ ಡಿಸಿಎಂ ಹುದ್ದೆಯ ಕನಸಿಟ್ಟುಕೊಂಡು ದೆಹಲಿಗೆ ತೆರಳಿದ ಸಚಿವರ ಬಗ್ಗೆ ಗೊತ್ತಿಲ್ಲವೆಂದಿದ್ದಾರೆ.