ಬೆಂಗಳೂರು: ಉಚಿತ ಯೋಜನೆಗಳಿಗೆ ಹಣ ಕೊಡಲು ಆಗುತ್ತಿಲ್ಲ. ಈ ಸರ್ಕಾರ 100ಕ್ಕೆ ನೂರರಷ್ಟು ದಿವಾಳಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ನಾವು ಪರಿಹಾರ ಕೊಟ್ಟಿದ್ದೆವು, ಅಷ್ಟೇ ಪರಿಹಾರ ಇವರು ಕೊಡಬೇಕಿತ್ತು. ಯಾವ ಗ್ಯಾರಂಟಿ ಸರಿಯಾಗಿ ಈಡೇರಿಸಿಲ್ಲ. ಈ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಗರಂ ಆದರು.
ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಬರ ಪರಿಹಾರ ಎರಡು ಸಾವಿರ ಕೊಡ್ತೀವಿ ಅಂತಾರೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಗಾದೆ ಮಾತಿನಂತೆ ಆಗಿದೆ. ರೈತರಿಗೆ ಬರ ಪರಿಹಾರ ಕೊಡುವಲ್ಲೂ ವಿಫಲವಾಗಿದೆ. ಪಿಎಂ ಮೋದಿ ಭೇಟಿಗೆ ಅವಕಾಶ ಕೊಟ್ಟಿದ್ದಾರೆ, ಅಮಿತ್ ಶಾ ಭೇಟಿ ಸಹ ಆಗಿದೆ. ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿ. ನಮ್ಮಲ್ಲಿ ಹಸಿರು ಬರ ಇದೆ, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದೇ ಸಲ ಬಿಡುಗಡೆ ಮಾಡುವುದು. ಕರ್ನಾಟಕಕ್ಕೆ ಮೊದಲು ಬಿಡುಗಡೆ ಮಾಡಲ್ಲ. ನಿಮ್ಮ ಪಾಲಿನ ಹಣ ಬಿಡುಗಡೆ ಮಾಡಿ