ಕನಕಪುರ: ಕರ್ನಾಟಕದಲ್ಲಿ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಕನಕಪುರ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಹೇಳಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ.
ಹೆಚ್ಚು ಕಡಿಮೆಯಾದರೇ ನಮ್ಮ ಕೇಂದ್ರ ನಾಯಕರು ಇದ್ದಾರೆ ಎಂದರು. ಸರ್ಕಾರ ರನಚೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ. ಅತಿ ದೊಡ್ಡ ಪಕ್ಷಾಗಿ ಬಂದರೆ ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಈ ಬಾರಿ ಆಪರೇಷನ್ ಕಮಲ ನಡೆಯುತ್ತಾ ಎಂಬುದಾಗಿ ಕೇಳಿದಂತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನಾವು ಚುನಾವಣಾ ತಂತ್ರಗಾರಿಕೆ ಮಾಡಿಯೇ ಮಾಡುತ್ತೇವೆ. ಕೇಂದ್ರ ನಾಯಕರ ಸೂಚನೆಯನ್ನು ಪಾಲನೆ ಮಾಡುತ್ತೇವೆ. ನಾವು ಮಾಡಿದರೆ ಮಾತ್ರವೇ ಆಪರೇಷನ್ ಕಮಲವೆ? ಕಾಂಗ್ರೆಸ್, ಜೆಡಿಎಸ್ ಮಾಡಿದರೆ ಏನು ಎಂದು ಎಂಬುದಾಗಿ ಪ್ರಶ್ನಿಸಿದರು.
ನಾನು, ವಿ.ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ಕನಕಪುರ ಕ್ಷೇತ್ರದಲ್ಲಿ ಪ್ರಚಾರ ಜೋರಾಗಿಯೆ ಆಗಿದೆ. ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಪಿಮುಷ್ಠಿಯಲ್ಲಿದೆ. ಮೊದಲಿನಿಂದಲೂ ಕನಕಪುರ ಕ್ಷೇತ್ರದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಸಮೀಕ್ಷೆಯೇ ಸುಳ್ಳು ಅಂತ ನಾನು ಹೇಳಲ್ಲ ಎಂದರು.
ಸರ್ಕಾರ ರಚನೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ. ಮೇ.13ರ ಫಲಿತಾಂಶದ ನಂತ್ರ ಎಲ್ಲಾ ತಯಾರಿ ನಡೆಯಲಿದೆ. ಆದ್ರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರುವುದಿಲ್ಲ ಎಂದರು.