PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಸ್ಕಾಟ್ಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಪಾಕ್ ಮೂಲದ ಹಂಝಾ ಯೂಸುಫ್‌ ನೇಮಕ

March 29, 2023

ಕ್ಷಮೆ ಕೇಳದಿದ್ದರೆ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್

March 29, 2023

Code Of conduct: ಮಾಜಿ ಸಿಎಂ ಸಿದ್ದರಾಮಯ್ಯ ನೀತಿ ಸಂಹಿತೆ ಉಲ್ಲಂಘಿಸಿದ್ರಾ?! ಏನ್ ಹೇಳಿದ್ರು ಸಿದ್ದು!

March 29, 2023
Facebook Twitter Instagram
Thursday, March 30
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ
ಜಿಲ್ಲೆ Prajatv KannadaBy Prajatv KannadaMarch 15, 2023

ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಉಡುಪಿ: ಫೈಟರ್ ರವಿ (Fighter Ravi) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಸ್ಪರ ನಮಸ್ಕಾರ ಮಾಡಿಕೊಂಡ ಫೋಟೊ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಮನಮೋಹನ್ ಸಿಂಗ್ (Manmohan Singh) ಫೋಟೋವನ್ನು ಹೋಲಿಕೆ ಮಾಡಿ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿಗೆ ಕೈ ಮುಗಿಯಬಾರದು ಎಂದು ನಾವು ಹೇಳಲು ಆಗುವುದಿಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಪ್ರಧಾನ ಮಂತ್ರಿಗೆ ಕೈಮುಗಿಯುತ್ತಾರೆ. ಯಾರೇ ಕೈಮುಗಿದರೂ ವಾಪಾಸ್ ಕೈಮುಗಿಯುವುದು ಪ್ರಧಾನ ಮಂತ್ರಿಗಳು ಇಟ್ಟುಕೊಂಡ ಸಂಪ್ರದಾಯ. ಆತ ಯಾವ ವ್ಯಕ್ತಿ? ಆತನ ಹೆಸರೇನು? ಯಾವ ಸೀಟು ಎನ್ನುವುದು ಪ್ರಧಾನಿಗೆ ಗೊತ್ತಿರುವುದಿಲ್ಲ ಎಂದು ಹೇಳಿದರು.

ಭಾರತೀಯನೊಬ್ಬ ಪ್ರಧಾನಿಗೆ ಕೈಮುಗಿದಿದ್ದಾನೆ. ಆತ ರೌಡಿಶೀಟರ್ ಆಗಿದ್ದರೆ ಯಾವ ರಕ್ಷಣೆಯೂ ಇಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಏನಾದರು ಅಪರಾಧ ಮಾಡಿದರೆ ಸಂವಿಧಾನದ ಪ್ರಕಾರ ಕ್ರಮ ಆಗುತ್ತದೆ. ಬಿಜೆಪಿ (BJP) ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಗೆ (Vijaya Sankalpa Yatra) ಅಭೂತಪೂರ್ವ ಸ್ಪಂದನೆಯನ್ನು ಜನತೆ ನೀಡಿದ್ದಾರೆ. ಯುವಕರ ರಣೋತ್ಸವ, ಕಾಯಕರ್ತರ ಉತ್ಸಾಹದಿಂದಾಗಿ ಸಾವಿರಾರು ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇದರ ಆಧಾರದಲ್ಲಿ ಬಿಜೆಪಿ ಪಕ್ಷವು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಹಳೇ ಮೈಸೂರು (Mysuru) ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಗೂ ತಡಕಾಡುತ್ತಿದ್ದ ಕಾಲವಿತ್ತು. ಆದರೆ ಈಗ ನೂರಕ್ಕೆ ನೂರು ಶಕ್ತಿ ವೃದ್ಧಿಸಿದೆ. ಪ್ರಧಾನಿ ಮೋದಿಯವರ ಮಂಡ್ಯ (Mandya) ಭೇಟಿ ವೇಳೆ ಜನರು ತೋರಿದ ಪ್ರೀತಿಯೇ ಇದಕ್ಕೆ ಸಾಕ್ಷಿ ಎಂದರು. ಲೋಕಾಯುಕ್ತಕ್ಕೆ ಹಲ್ಲು ಕೊಟ್ಟದ್ದು ಬಿಜೆಪಿ ಸರ್ಕಾರ. ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Madal Virupakshappa) ವಿರುದ್ಧ ದಾಖಲಾಗಿರುವ ಲೋಕಾಯುಕ್ತ ಪ್ರಕರಣವು ಚುನಾವಣಾ ಸನಿಹದಲ್ಲಿರುವುದರಿಂದ ಸ್ವಾಭಾವಿಕವಾಗಿ ಚರ್ಚೆಯಾಗುತ್ತದೆ. ಆದರೆ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿ, ಎಸಿಬಿ ರಚಿಸಿದ್ದು ಯಾರು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಲೋಕಾಯುಕ್ತಕ್ಕೆ ಮರುಜೀವ ನೀಡಿ, ಶಕ್ತಿ ಕೊಟ್ಟು, ಹಲ್ಲು ಕೊಟ್ಟಿರುವುದು ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಎಂದರು.

ಪಾರದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಬಿಟ್ಟು ಬೇರೆ ಯಾವ ಸರ್ಕಾರ ಇದ್ದರೂ, ಆಡಳಿತ ಪಕ್ಷದ ಶಾಸಕನ ಮೇಲೆ ಪ್ರಕರಣ ದಾಖಲಾಗಲು ಸಾಧ್ಯವಿತ್ತೆ? ಆರೋಪವಿದೆ, ಅದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

 

Share. Facebook Twitter WhatsApp Pinterest LinkedIn Tumblr Telegram Email

Related Posts

Code Of conduct: ಮಾಜಿ ಸಿಎಂ ಸಿದ್ದರಾಮಯ್ಯ ನೀತಿ ಸಂಹಿತೆ ಉಲ್ಲಂಘಿಸಿದ್ರಾ?! ಏನ್ ಹೇಳಿದ್ರು ಸಿದ್ದು!

March 29, 2023

ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪ ಶುದ್ಧ ಸುಳ್ಳು: ಸಚಿವ ಬೈರತಿ‌ ಬಸವರಾಜ್

March 29, 2023

CM Ibrahim: 2023ರ ಚುನಾವಣೆಯಲ್ಲಿ HDK ಸಿಎಂ ಆಗದಿದ್ರೆ ನಾನು ರಾಜಕೀಯ ನಿವೃತ್ತಿ: ಸಿಎಂ ಇಬ್ರಾಹಿಂ

March 29, 2023

ಜನಾರ್ದನ ರೆಡ್ಡಿ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತ ಬಳಿಕ ಮೊದಲ ಪ್ರವಾಸ ಕಾರ್ಯಕ್ರಮ

March 29, 2023

Death: ನೀರಿನ ಆಳ ಪರೀಕ್ಷೆಗಿಳಿದು ಮೂವರು ವಿದ್ಯಾರ್ಥಿಗಳು ನೀರುಪಾಲು

March 29, 2023

ಮತ್ತೆ ‘ಕೈ’ ಸೇರಲು ಮುಂದಾದ ಎ.ಬಿ.ಮಾಲಕರೆಡ್ಡಿ : ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೊಂದು ಹೊಡೆತ

March 29, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.