: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಫಿಟ್ ಆಗಿರಲು ಜಿಮ್ ಗೆ ಹೋಗಿ ಬೆವರಿಳಿಸುತ್ತಾರೆ. ಕೆಲವರು ವಯಸ್ಸಾದ್ಮೇಲೂ ಜಿಮ್ ಗೆ ಹೋಗಲು ಆಸಕ್ತಿ ತೋರುತ್ತಾರೆ. ಆದ್ರೆ ದಕ್ಷಿಣ ಕೋರಿಯಾದ ಜಿಮ್ ಒಂದು ವಿಶೇಷ ನಿಯಮ ಶುರು ಮಾಡಿದೆ. ಇದು ವಯಸ್ಸಾದ ಆಂಟಿಯರ ಕಣ್ಣು ಕೆಂಪು ಮಾಡಿದೆ.
ಹೌದು ಜಿಮ್ ಗೆ ಬರ್ತಿದ್ದ ಕೆಲ ಮಹಿಳೆಯರ ಅಸಭ್ಯ ವರ್ತನೆಯನ್ನು ನೋಡಿ ಜಿಮ್ ಈ ನಿರ್ಧಾರಕ್ಕೆ ಬಂದಿದೆ. ಜಿಮ್ ಗೆ ಬರುವ ಜನರು ವರ್ಕೌಟ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ತಾರೆ. ಈಗ ಜಿಮ್ ನಲ್ಲಿ ರೀಲ್ಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ.
ಇನ್ನು ಫ್ರೆಂಡ್ಸ್ ಜೊತೆ ಜಿಮ್ ಗೆ ಬರೋರು, ವರ್ಕ್ ಔಟ್ ಮಾಡೋ ಬದಲು ಹರಟೆ ಹೊಡೆಯುತ್ತ ಕುಳಿತಿರ್ತಾರೆ. ಈ ಹರಟೆ, ಗಲಾಟೆಯೇ ದಕ್ಷಿಣ ಕೊರಿಯಾ ಮಹಿಳೆಯರಿಗೆ ಮುಳುವಾಗಿದೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಸಮೀಪದ ಇಂಚಿಯಾನ್ ನಗರದ ಜಿಮ್ ಸದ್ಯ ಚರ್ಚೆಯಲ್ಲಿದೆ. ಇಲ್ಲಿ ಅಜುಮ್ಮಾಗೆ ಪ್ರವೇಶ ನಿಷೇಧಿಸಲಾಗಿದೆ ಮತ್ತು ಸುಸಂಸ್ಕೃತ ಮತ್ತು ಸುಂದರ ಮಹಿಳೆಯರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ ಎಂಬ ಫಲಕವನ್ನು ಜಿಮ್ ಮುಂದೆ ನೇತುಹಾಕಲಾಗಿದೆ.
ದಕ್ಷಿಣ ಕೋರಿಯಾದಲ್ಲಿ ಅಜುಮ್ಮಾ ಅಂದ್ರೆ ವಯಸ್ಸಾದ ಮಹಿಳೆಯರು ಎಂದರ್ಥ. ಇನ್ನೂ ಜಿಮ್ ಗೆ ಬರುವವರು ವರ್ಕೌಟ್ ಮಾಡಿ ಹೋಗ್ಬೇಕುಆದ್ರೆ ಅಲ್ಲಿಗೆ ಬರುವ ಮಹಿಳೆಯರು ವರ್ಕೌಟ್ ಬದಲು ಮೋಜು ಮಾಡಲು ಬರ್ತಿದ್ದರು. ವ್ಯರ್ಥ ಸಮಯ ಹೇಳು ಮಾಡ್ತಿದ್ದರು. ಜಿಮ್ ನಲ್ಲಿರುವ ಬಟ್ಟೆ, ಸೋಪ್, ಟವೆಲ್, ಹೇರ್ ಡ್ರೈಯರ್ ಸೇರಿದಂತೆ ಅನೇಕ ವಸ್ತುಗಳನ್ನು ಕದ್ದೊಯ್ಯುತ್ತಿದ್ದರು. ಮಹಿಳೆಯರ ಈ ಕೆಲಸದಿಂದ ಜಿಮ್ ಗೆ ಭಾರೀ ನಷ್ಟವಾಗಿತ್ತು
ಅದಲ್ಲದೆ ಇನ್ನೊಂದಿಷ್ಟು ಮಹಿಳೆಯರ ದೇಹದ ಆಕಾರವನ್ನು ಅವರು ಅವಹೇಳನ ಮಾಡುತ್ತಿದ್ದರು. ಇತರರ ಕಾಲೆಳೆಯುವ ಕೆಲಸ ನಡೆಯುತ್ತಿತ್ತು. ಇದ್ರಿಂದಾಗಿ ಉಳಿದವರಿಗೆ ತೊಂದ್ರೆ ಆಗ್ತಿತ್ತು. ಅನೇಕರು ಈ ಮಹಿಳೆಯರ ಕಾಟ ತಾಳಲಾರದೆ ಜಿಮ್ ತೊರೆದಿದ್ದರು ಎಂದು ಜಿಮ್ ಮಾಲೀಕರು ಹೇಳಿದ್ದಾರೆ. ಜಿಮ್ ಮುಂದೆ ಈ ಫಲಕ ಹಾಕಿರೋದಕ್ಕೆ ವಿರೋಧ ಕೇಳಿ ಬರ್ತಿದೆ. ಹಿರಿಯ ಮಹಿಳೆಯರಿಗೆ ಇಲ್ಲಿ ಅವಹೇಳನ ಮಾಡಲಾಗಿದೆ, ದೇಶದಲ್ಲಿ ವಯಸ್ಸಾದ ಮಹಿಳೆಯರ ವಿರುದ್ಧ ತಾರತಮ್ಯವಾಗ್ತಿದೆ ಎನ್ನುವ ಚರ್ಚೆ ಮತ್ತೆ ಚುರುಕು ಪಡೆದಿದೆ.
ಇತ್ತೀಚೆಗಂತೂ ದೇಹ ಬೆಳೆಸಿಕೊಳ್ಳಲು ಜಿಮ್ ಗೆ ಹೋಗಿ ಕಸರತ್ತು ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಬೆಳಗಾದರೆ, ಜಿಮ್ ಗಳು ಭರ್ತಿಯಾಗಿರುತ್ತದೆ. ಬೆಳಗಿನ ಸ್ಲಾಟ್ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲ ಜಿಮ್ ಗಳೂ ಭರ್ತಿ. ಹೆಚ್ಚಿನ ವರ್ಕೌಟ್ ಮಾಡುವುದಕ್ಕೆ ದೇಹಕ್ಕೆ ಶಕ್ತಿ ಬೇಕು ತಾನೇ? ಅದಕ್ಕಾಗಿ, ದಿನಕ್ಕಿಷ್ಟು ಎಂದು ಲೆಕ್ಕವಿಟ್ಟು ಮೊಟ್ಟೆ ಸೇವನೆ ಮಾಡುವುದು, ಮಾಂಸಖಂಡಗಳನ್ನು ಬಲಪಡಿಸಲು ಸ್ಟಿರಾಯ್ಡ್ ಸೇವಿಸುವುದು, ಜಿಮ್ ಗಳಲ್ಲಿ ನೀಡುವ ಶಕ್ತಿವರ್ಧಕ ಜ್ಯೂಸ್ ಕುಡಿಯುವುದು ಇವೆಲ್ಲ ಸಾಮಾನ್ಯ. ಇವು ನಿಧಾನವಾಗಿ ದೇಹಕ್ಕೆ ತೊಂದರೆ ಒಡ್ಡುತ್ತವೆ ಎನ್ನುವುದು ಇತ್ತೀಚಿನ ಅಧ್ಯಯನಗಳಲ್ಲಿ