ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ ಫಾಸ್ಟ್ಟ್ರ್ಯಾಕ್ ಕೋರ್ಟ್ಗೆ ಕೊಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಹಾ ಪ್ರಕರಣವನ್ನು ಅವಶ್ಯಕತೆ ಬಿದ್ದರೆ ಮಾತ್ರ ಫಾಸ್ಟ್ಟ್ರ್ಯಾಕ್ ಕೋರ್ಟ್ಗೆ ಕೊಡುತ್ತೇವೆ. ಇದನ್ನು ನಾವು ನಿರ್ಧರಿಸುವುದಿಲ್ಲ. ಪೊಲೀಸ್ ಇಲಾಖೆಯಲ್ಲಿ ಈ ಕೇಸ್ ಹೇಗೆ ಮುಂದುವರಿಯಬೇಕೆಂದು ತಿಳಿದುಕೊಂಡು ನಿರ್ಧಾರ ಮಾಡುತ್ತೇವೆ. ಇಂತಹ ಪ್ರಕರಣಗಳನ್ನು ಬೇಗ ತೆಗೆದುಕೊಳ್ಳಲು ನ್ಯಾಯಾಂಗದಲ್ಲಿ ಅವಕಾಶ ಇದೆ ಎಂದರು.
ಏಪ್ರಿಲ್ 17 ರಂದು ಹುಬ್ಬಳ್ಳಿಯ ಕಾಲೇಜುವೊಂದರಲ್ಲಿ ನಡೆದಿದ್ದ ‘ಕೈ’ ಕಾರ್ಪೊರೇಟರ್ ಮಗಳ ಹತ್ಯೆ ಪ್ರಕರಣವನ್ನು ಇಡೀ ದೇಶ ಖಂಡಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹತ್ಯೆಯಾದ ನೇಹಾ ಹಿರೇಮಠ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದರು. ಶೀಘ್ರ ನ್ಯಾಯಕ್ಕಾಗಿ ಫಾಸ್ಟ್ಟ್ರ್ಯಾಕ್ ಕೋರ್ಟ್ ಮಾಡುವುದಾಗಿ ಸಿಎಂ ಮಾತು ಕೊಟ್ಟಿದ್ದರು. ಆದರೆ ಈಗ ಫಾಸ್ಟ್ಟ್ರ್ಯಾಕ್ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಕೊಟ್ಟ ಮಾತನ್ನು ಮುರಿದಂತಾಗಿದೆ.