ನಟ ಸಲ್ಮಾನ್ ಖಾನ್ ಮನೆ ಮುಂದೆ ನಿನ್ನೆ ಮುಂಜಾನೆ ದುಷ್ಕರ್ಮಿಗಳು ಶೂಟೌಟ್ ನಡೆಸಿದ್ದಾರೆ. ಶೂಟೌಟ್ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಸದ್ಯ ಸಲ್ಲು ಮನೆ ಮುಂದೆ ಭದ್ರತೆ ಹೆಚ್ಚಿಸಲಾಗಿದ್ದು ಈ ಬಗ್ಗೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಇದರಲ್ಲಿ ‘ಹೇಳೋಕೆ ಏನೂ ಇಲ್ಲ. ಅವರಿಗೆ ಪಬ್ಲಿಸಿಟಿ ಬೇಕು. ಈ ಬಗ್ಗೆ ಚಿಂತಿಸೋ ಅಗತ್ಯವಿಲ್ಲ’ ಎಂದಿದ್ದಾರೆ’. ಇದರಿಂದ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಭಯ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಮುಂದೇನಾಗುತ್ತದೆ ಎನ್ನುವ ಚಿಂತೆ ಅಭಿಮಾನಿಗಳಲ್ಲಿ ಶುರುವಾಗಿದೆ.
ಏಪ್ರಿಲ್ 14ರ ಮುಂಜಾನೆ ಮುಂಬೈನ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನಲ್ಲಿರುವ ಸಲ್ಮಾನ್ ಖಾನ್ ಮನೆ ಸಮೀಪ ಗುಂಡಿನ ದಾಳಿ ಕೇಳಿಸಿದೆ. ಬೈಕ್ನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ಮಾಡಿದ್ದರು. ಸದ್ಯ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಾಳಿಯ ಬಳಿಕ ಬೈಕ್ನಲ್ಲಿ ಬಂದವರು ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇ ಅತ್ತ ತೆರಳಿದ್ದಾರೆ. ಹೀಗಾಗಿ ದಾಳಿ ಮಾಡಿದವರು ಮುಂಬೈನಿಂದ ಹೊರ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಅವರಿಂದ ಬೆದರಿಕೆ ಬಂದಿತ್ತು. ಅವರ ಗ್ಯಾಂಗ್ನ ಹಿಟ್ಲಿಸ್ಟ್ನಲ್ಲಿ ಸಲ್ಮಾನ್ ಖಾನ್ ಹೆಸರು ಇದೆ. ಆ ಬಳಿಕ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಇದೀಗ ಸಲ್ಲು ಮನೆ ಮುಂದೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.