ಯಾರಿಂದಲೂ ನನ್ನ ದಾಖಲೆ ಮುರಿಯಲು ಆಗುವುದಿಲ್ಲ ಎಂದು ಉಸೇನ್ ಬೋಲ್ಟ್ ಹೇಳಿದ್ದಾರೆ. ಹೌದು ಅತಿವೇಗವಾಗಿ 100 ಮೀ. ಹಾಗೂ 200 ಮೀ. ಓಟ ಪೂರ್ತಿಗೊಳಿಸಿದ ವಿಶ್ವ ದಾಖಲೆ ಹೊಂದಿರುವ ಜಮೈಕಾದ ಉಸೇನ್ ಬೋಲ್ಟ್, ಸದ್ಯಕ್ಕೆ ತಮ್ಮ ದಾಖಲೆಗಳನ್ನು ಯಾರೂ ಮುರಿಯುವ ನಿರೀಕ್ಷೆ ಇಲ್ಲ ಎಂದಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಬೋಲ್ಟ್, ‘ಸದ್ಯಕ್ಕೆ ನನ್ನ ದಾಖಲೆಗಳು ಸುರಕ್ಷಿತ. ಈಗಿರುವ ಅಥ್ಲೀಟ್ಗಳ ಪೈಕಿ ಯಾರಿಂದಲೂ ನನ್ನ ದಾಖಲೆ ಮುರಿಯಲು ಆಗುವುದಿಲ್ಲ ಎಂಬ ನಂಬಿಕೆ ನನಗಿದೆ. ಇನ್ನೂ ಕೆಲ ವರ್ಷಗಳ ಕಾಲ ದಾಖಲೆಗಳು ನನ್ನ ಹೆಸರಲ್ಲೇ ಇರಲಿವೆ’ ಎಂದಿದ್ದಾರೆ.
. ಓಟವನ್ನು 19.19 ಸೆಕೆಂಡ್ಗಳಲ್ಲಿ ಬೋಲ್ಟ್ ಪೂರ್ತಿಗೊಳಿಸಿ ವಿಶ್ವ ದಾಖಲೆ ಬರೆದಿದ್ದರು. ಸತತ 3 ಒಲಿಂಪಿಕ್ಸ್ಗಳಲ್ಲಿ 100 ಮೀ., 200 ಮೀ., ಓಟದಲ್ಲಿ ಚಿನ್ನ ಗೆದ್ದ ಏಕೈಕ ಅಥ್ಲೀಟ್ ಎನ್ನುವ ದಾಖಲೆಯೂ ಬೋಲ್ಟ್ ಹೆಸರಿನಲ್ಲಿದೆ.