ಬೆಂಗಳೂರು:- ಜಲಮಂಡಳಿಯು ಹೋಳಿ ಹಬ್ಬದಲ್ಲಿ ರೈನ್ ಡ್ಯಾನ್ಸ್ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಖಡಕ್ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಈ ಹಿನ್ನಲೆ ಎಚ್ಚೆತ್ತ ಬೆಂಗಳೂರು ಜಲಮಂಡಳಿ, ನೀರು ಬಳಸದಂತೆ ಆದೇಶಿಸಿದೆ.
ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದೆ. ಈ ಸಂಬಂಧ, ಉಲ್ಬಣವಾಗಿರುವ ಸಮಸ್ಯೆಗಳನ್ನು ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವದಾಗಿರುತ್ತದೆ. ಈ ಹಿನ್ನಲೆಯಲ್ಲಿ ಹೋಳಿ ಹಬ್ಬವು ಸಾಂಸ್ಕೃತಿವಾದ ಆಚರಣೆಯ ಹಬ್ಬ. ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ.
ಜೊತೆಗೆ ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಾಗಿರುವುದಿಲ್ಲ. ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಸೂಚನೆ ನೀಡಲಾಗಿದೆ.