ಹಣದಿಂದ ಯಾರ ಧರ್ಮವನ್ನ ಬದಲಾಯಿಸಲಾಗುವುದಿಲ್ಲ: ಗೃಹ ಸಚಿವ ಅಮಿತ್ ಶಾ

ರಾಷ್ಟ್ರೀಯ

ನವದೆಹಲಿ : ಶ್ರದ್ಧಾ ಕೊಲೆ ಪ್ರಕರಣದಲ್ಲಿ ಅಪರಾಧಿಯು ಅತ್ಯಂತ ಕಠಿಣ ಶಿಕ್ಷೆಯನ್ನ ನೀಡೋದನ್ನ ನ್ಯಾಯಾಲಯದ ಮೂಲಕ ಸರ್ಕಾರ ಖಚಿತಪಡಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಶ್ರದ್ಧಾ ಕೊಲೆ ಪ್ರಕರಣದಲ್ಲಿ ಯಾರೇ ಜವಾಬ್ದಾರರಾಗಿದ್ದರೂ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಕಠಿಣ ಶಿಕ್ಷೆಯನ್ನ ಪಡೆಯುತ್ತಾರೆ. ಇನ್ನು ಅವರು ಇಡೀ ಪ್ರಕರಣದ ಮೇಲೆ ನೇರ ಕಣ್ಣಿಟ್ಟಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

ಮತಾಂತರ ಕಾನೂನು ಕುರಿತ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವರು, ‘ನಾವು ರಾಜ್ಯಗಳಲ್ಲಿ ಎಲ್ಲೆಲ್ಲಿ ಸರ್ಕಾರಗಳನ್ನ ಹೊಂದಿದ್ದೇವೆಯೋ ಅಲ್ಲಿ ಮತಾಂತರದ ವಿರುದ್ಧ ಕಾನೂನು ಇದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಯಾರು ಬೇಕಾದರೂ ತಮ್ಮ ಧರ್ಮವನ್ನ ಪ್ರಚಾರ ಮಾಡಬಹುದು. ಆದ್ರೆ, ಆಮಿಷವೊಡ್ಡುವ ಮೂಲಕ, ಹಣವನ್ನ ನೀಡುವ ಮೂಲಕ ಅಥವಾ ಬಲವಂತವಾಗಿ ಯಾರ ಧರ್ಮವನ್ನ ಬದಲಾಯಿಸಲಾಗುವುದಿಲ್ಲ.

ಮತಾಂತರದ ವಿರುದ್ಧ ನಾವು ಕಾನೂನುಗಳನ್ನ ಮಾಡಿದ್ದೇವೆ ಮತ್ತು ಅವುಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊ ಳಿಸಲಾ ಗುತ್ತಿದೆ. ರಾಜ್ಯಗಳ ಮತಾಂತರ ಕಾನೂನುಗಳು ಆಮಿಷ ಒಡ್ಡುವಿಕೆ ಮತ್ತು ಇತರ ಮಾರ್ಗಗಳ ಮೂಲಕ ಜನರನ್ನ ಮತಾಂತ ರಗೊಳಿಸುವ ನಡುವಿನ ವ್ಯತ್ಯಾಸವನ್ನ ತೋರಿಸುತ್ತವೆ ಎಂದು ಗೃಹ ಸಚಿವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ಮತಾಂತರದ ವಿರುದ್ಧ ಕಾನೂನನ್ನ ತರುವುದಕ್ಕೆ ಸಂಬಂಧಿಸಿದಂತೆ ಇದು ‘ಸೂಕ್ಷ್ಮ’ ವಿಷಯವಾಗಿದೆ ಎಂದು ಗೃಹ ಸಚಿವರು ಹೇಳಿದರು.