ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ ಪದ್ಮಜೀತ ನಾಡಗೌಡ ಪಾಟೀಲ ತಮ್ಮ ನಿವಾಸದಲ್ಲಿಂದು ಚುನಾವಣೆ ಗದ್ದಲದಿಂದ ಮುಕ್ತರಾಗಿ ಅವರ ಮಗನ ಜೊತೆ ಕ್ರಿಕೆಟ್ ಆಡುತ್ತಾ ಸಮಯ ಕಳೆದರು.
ತೇರದಾಳ ಮತಕ್ಷೇತ್ರದ ಮತದಾರರು ಮತ್ತು ಪೋಲಿಂಗ್ ಏಜೆಂಟರು ಚುನಾವಣೆಯ ಕುರಿತು ಕ್ಷೇತ್ರದ ವಿವಿಧ ಬುತಗಳಲ್ಲಿ ಬಂದ ಮತದಾರ ಭಾರಿ ರೆಸ್ಪಾನ್ಸ್ ಬಗ್ಗೆ ಚರ್ಚೆ ನಡೆಸಿದ್ದ ಡಾ ಪದ್ಮಜೀತ ನಾಡಗೌಡ ಪಾಟೀಲ.
ಕಳೆದ ಹಲವು ದಿನಗಳಿಂದ ಚುನಾವಣೆಯಲ್ಲಿ ಬಿಜಿ ಆಗಿದ್ದ ಡಾ ಪದ್ಮಜೀತ ನಾಡಗೌಡ ಪಾಟೀಲ ಅವರ ಧರ್ಮಪತ್ನಿ ಚುನಾವಣೆ ಪ್ರಚಾರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದರು.. ಯುವ ಮತದಾರ ಒಲವು ಅವರು ಕೊಟ್ಟ ಸಹಕಾರ ಬಗ್ಗೆ ಜೊತೆ ಚರ್ಚೆ ನಡೆಸಿದ್ದರು. ಡಾ ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ ಈ ಬಾರಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಕಾಶ ಕುಂಬಾರ, ಬಾಗಲಕೋಟೆ