ದಕ್ಷಿಣ ಕೊರಿಯಾ ಜೊತೆಗಿನ ಗಡಿಯನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಯಾವುದೇ ಆಕಸ್ಮಿಕ ಘರ್ಷಣೆ ತಡೆಯಲು ಅಮೆರಿಕದ ಮಿಲಿಟರಿಗೆ ಮಾಹಿತಿ ನೀಡಲಾಗಿದೆ ಎಂದು ಉತ್ತರ ಕೊರಿಯಾ ಸೇನೆ ತಿಳಿಸಿದೆ.
ಮುಂದೊಂದು ದಿನ ಎರಡೂ ಕೊರಿಯಾಗಳ ನಡುವಿನ ಪ್ರಯಾಣವನ್ನು ಸುಗಮಗೊಳಿಸುವ ಸಾಧ್ಯತೆ ಇರುವುದರಿಂದ ರಸ್ತೆಗಳು ಮತ್ತು ರೈಲು ಮಾರ್ಗಗಳನ್ನೂ ಕಡಿತಗೊಳಿಸಲಾಗುವುದು.
ದಕ್ಷಿಣದ ಗಡಿಪ್ರದೇಶದಲ್ಲಿ ಪ್ರಾರಂಭಿಸಲಿರುವ ರಕ್ಷಣಾ ಯೋಜನೆಯ ಬಗ್ಗೆ ಯಾವುದೇ ತಪ್ಪು ನಿರ್ಣಯ ಮತ್ತು ಆಕಸ್ಮಿಕ ಸಂಘರ್ಷವನ್ನು ಅಮೆರಿಕದ ಪಡೆಗಳಿಗೆ ದೂರವಾಣಿ ಸಂದೇಶ ರವಾನಿಸಲಾಗಿದೆ ಎಂದು ಉತ್ತರ ಕೊರಿಯಾ ಸೇನೆ ಹೇಳಿದೆ. ಉಭಯ ಕೊರಿಯಾಗಳ ನಡುವಿನ ಗಡಿಪ್ರದೇಶದಲ್ಲಿ ಉತ್ತರ ಕೊರಿಯಾ ನೆಲ ಬಾಂಬ್ ಗಳನ್ನು ಹುಗಿದಿರಿಸಿದೆ ಮತ್ತು ತಡೆಗೋಡೆ ನಿರ್ಮಿಸುತ್ತಿದೆ ಎಂದು ಜುಲೈಯಲ್ಲಿ ದಕ್ಷಿಣ ಕೊರಿಯಾ ಸೇನೆ ಹೇಳಿತ್ತು.