ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕಳೆದ ಐದು ದಿನಗಳ ಹಿಂದಷ್ಟೇ ಪ್ರೇಮಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಹೊಸತರಲ್ಲೇ ನಟಿ ತಮ್ಮ ಪತಿಯ ಜೊತೆ ಆಸ್ಪತ್ರೆಯೊಂದರ ಹೊರಗೆ ಕಾಣಿಸಿಕೊಂಡಿದ್ದು ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಸೋನಾಕ್ಷಿ ಗರ್ಭಿಣಿಯೇ ಎಂಬ ಸಂಶಯ ನೆಟ್ಟಿಗರಲ್ಲಿ ಶುರುವಾಗಿದೆ.
ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ನಟಿ ಸೋನಾಕ್ಷಿ ಅವರು ತಮ್ಮ ಪತಿ ಜಹೀರ್ ಅವರ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊಗಳಲ್ಲಿ ಸೆರೆ ಹಿಡಿದಿದ್ದಾರೆ. ದಂಪತಿ ಪೋಟೊಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಬಾಲಿವುಡ್ ನಟಿಯರಾದ ಆಲಿಯಾ ಭಟ್, ಸ್ವರಾ ಭಾಸ್ಕರ್ ಅವರು ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಘೋಷಣೆ ಮಾಡಿದ್ದರು, ಹೀಗಾಗಿ ಈ ಸುದ್ದಿ ಹರಿದಾಡಿದೆ. ಸದ್ಯದಲ್ಲೇ ಸೋನಾಕ್ಷಿ ಕೂಡ ಗರ್ಭಿಣಿ ಎಂದು ಅನೌನ್ಸ್ ಮಾಡುತ್ತಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ರೊಟೀನ್ ಚಕ್ ಅಪ್ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೀಗಾಗಿ ತಂದೆಯನ್ನು ನೋಡಲು ಸೋನಾಕ್ಷಿ ಪತಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.