ಕೊಹಿಮಾ:- ಜನವರಿ 22 ರಂದು ನಡೆಯುವ ರಾಜಕೀಯ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಆರ್ಎಸ್ಎಸ್ ಮತ್ತು ಬಿಜೆಪಿ (BJP) ಜನವರಿ 22 ರ ಕಾರ್ಯವನ್ನು ಸಂಪೂರ್ಣವಾಗಿ ನರೇಂದ್ರ ಮೋದಿ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿದೆ. ಇದು ಆರ್ಎಸ್ಎಸ್ ಬಿಜೆಪಿ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಅಧ್ಯಕ್ಷರು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ನಾವು ಎಲ್ಲಾ ಧರ್ಮಗಳು, ಎಲ್ಲಾ ಆಚರಣೆಗಳಿಗೆ ಮುಕ್ತರಾಗಿದ್ದೇವೆ ಎಂದು ನಾಗಾಲ್ಯಾಂಡ್ನ ರಾಜಧಾನಿ ಕೊಹಿಮಾದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ಹೇಳಿದ್ದಾರೆ.
ಹಿಂದೂ ಧರ್ಮದ ವರಿಷ್ಠರು, ಹಿಂದೂ ಧರ್ಮದ ಮಠಾಧಿಪತಿಗಳು ಸಹ ಜನವರಿ 22 ರ ಸಮಾರಂಭ ರಾಜಕೀಯ ಕಾರ್ಯ ಎಂದು ತಮ್ಮ ಅಭಿಪ್ರಾಯವನ್ನು ಎಂದು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಭಾರತದ ಪ್ರಧಾನ ಮಂತ್ರಿಯ ಸುತ್ತ ವಿನ್ಯಾಸಗೊಳಿಸಲಾದ ಮತ್ತು ಆರೆಸ್ಸೆಸ್ ಸುತ್ತ ವಿನ್ಯಾಸಗೊಳಿಸಲಾದ ರಾಜಕೀಯ ಕಾರ್ಯಕ್ರಮಕ್ಕೆ ಹೋಗುವುದು ನಮಗೆ ಸರಿಯನಿಸುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಬಗ್ಗೆ ಟೀಕೆ ಮಾಡಿದ್ದು ಇದು ನರೇಂದ್ರ ಮೋದಿ ರಾಜಕೀಯ ಕಾರ್ಯಕ್ರಮ ಎಂದು ಹೇಳಿದ್ದಾರೆ