ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಪುಟಿನ್ ದೇಹವನ್ನು ಡಬಲ್ ಮಾಡಲಾಗಿದೆ ಎಂಬ ಆರೋಪಗಳನ್ನು ಕ್ರೆಮ್ಲಿನ್ (Kremlin) ತಳ್ಳಿಹಾಕಿದ್ದು, ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.
ಭಾನುವಾರ ಸಂಜೆ ಪುಟಿನ್ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿರುವುದಾಗಿ SVR ಟೆಲಿಗ್ರಾಮ್ ಚಾನೆಲ್ ವರದಿ ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕ್ರೆಮ್ಲಿನ್ ವಕ್ತಾರ ಪೆಸ್ಕೋವ್, ಪುಟಿನ್ ಆರೋಗ್ಯವಾಗಿದ್ದಾರೆ, ಬಾಡಿ ಡಬಲ್ ಮಾಡಲಾಗಿಲ್ಲ ಎಂದಿದ್ದಾರೆ.
ಪುಟಿನ್ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎನ್ನುತ್ತಿರುವುದು ಶುದ್ಧ ಸುಳ್ಳು. ಇದಕ್ಕೆ ನಗಬೇಕೋ ಅಳಬೇಕೋ ಎಂಬುದೇ ತಿಳಿಯುತ್ತಿಲ್ಲ. ಬೇರೆ ಯಾವುದೇ ಪ್ರತಿಕ್ರಿಯೆ ಕೊಡಲು ನನ್ನಿಂದ ಸಾಧ್ಯವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಪೆಸ್ಕೋವ್ ಹೇಳಿದ್ದಾರೆ
ಪುಟಿನ್ ಅಕ್ಟೋಬರ್ 7ರಂದು 71ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿರಂತರವಾಗಿ ಸಾರ್ವಜನಿಕ ಸಭೆಗಳು ಹಾಗೂ ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಹಲವು ಕಾರ್ಯಕ್ರಮಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿವೆ. ಇತ್ತೀಚೆಗೆ ಚೀನಾಗೆ ಭೇಟಿ ನೀಡಿ ಬರುತ್ತಿದ್ದಾಗಲೂ ರಷ್ಯಾದ ಎರಡು ನಗರಗಳಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿಯೂ ನಡೆದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಪುಟಿನ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.