ಪವಿತ್ರಾ ಗೌಡ ಬಂಧನವಾದಾಗ ವಿಚಾರಣೆ ಮಾಡುವ ತಂಡದಲ್ಲಿದ್ದ ವಿಜಯನಗರ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಹೌದು ಪವಿತ್ರಗೌಡ ಮನೆ ಮಹಜರು ಮಾಡುವ ವೇಳೆ ಪವಿತ್ರಗೌಡ ಕೂಡ ಇದ್ದರು. ಪವಿತ್ರಾಗೆ ಲಿಪ್ಸ್ಟಿಕ್ ಹಚ್ಚಲು ಪಿಎಸ್ಐ ಅವಕಾಶ ಕೊಟ್ಟಿದ್ದರು.
ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐ ನೇತ್ರಾ ಅವರಿಗೆ ನೋಟಿಸ್ ನೀಡಲಾಗಿದೆ.
ಎ1 ಆರೋಪಿಯಾಗಿರುವ ಪವಿತ್ರಾ ಗೌಡಳನ್ನ ಜೂನ್ 15ರಂದು ಸ್ಥಳ ಮಹಜರು ಮಾಡಲೆಂದು ಆರ್.ಆರ್ ನಗರದಲ್ಲಿರುವ ಆಕೆಯ ಮನೆಗೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಮನೆ ಪವಿತ್ರಾ ಗೌಡ ಲಿಪ್ಸ್ಸ್ಟಿಕ್ ಹಚ್ಚಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದಿದ್ದರು. ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ? ಇಲ್ಲಿ ಕರ್ತವ್ಯ ಲೋಪವಾಗಿರುವುದು ಕಂಡು ಬರುತ್ತಿದೆ
.ಇನ್ನೂ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಪವಿತ್ರಾ ಎಂಬವರಿಗೆ ಉದ್ಯಮಿಯಾಗಿದ್ದ ಸೌಂದರ್ಯ ಜಗದೀಶ್ 2 ಕೋಟಿ ರೂ. ಹಣ ಕೊಟ್ಟಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಪವಿತ್ರಾ ಗೌಡಗೆ ಈ ಹಣ ನೀಡಲಾಗಿತ್ತೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.