ಬೆಂಗಳೂರು:- ಪಬ್, ಹೊಟೇಲ್, ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಅಕ್ರಮವಾಗಿ ನಿಗದಿ ಪಡಿಸಿರುವ ಧೂಮಪಾನ ಸ್ಥಳ ತೆರವು ಮಾಡಲು ಕಮಿಷನರ್ ಆದೇಶ ಕಮಿಷನರ್ ಬಿ.ದಯಾನಂದ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಕೋಟ್ಪಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಎನ್ಓಸಿಯಲ್ಲಿ ತಿಳಿಸಿದ ಮಾನದಂಡಗಳಂತೆ ಸ್ಥಳ ನಿಗದಿ ಮಾಡಬೇಕು. ಧೂಮಪಾನ ನಿಗದಿ ಸ್ಥಳಗಳಲ್ಲಿ ಆಹಾರ, ನೀರು ಪಾನೀಯ ತಂಬಾಕು ಉತ್ಪನ್ನ ಒದಗಿಸುವುದು ನಿಷೇಧ ಮಾಡಲಾಗಿದ್ದು, ಸೂಚನಾ ಫಲಕ ಮತ್ತು ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ.
ಧೂಮಪಾನಿಗಳಲ್ಲದವರಿಗೆ ಹೊಗೆ ತಾಗದಂತೆ ಎಚ್ಚರಿಕೆ ವಹಿಸಬೇಕು. ಹಲವು ಕಟ್ಟುನಿಟ್ಟಿನ ಸೂಚನೆಗಳನ್ನ ಹೊರಡಿಸಿದ್ದಾರೆ.