ಆತ ಸರಗಳ್ಳತನದಲ್ಲಿ ಕುಖ್ಯಾತ.. ಈಗಾಗಲೇ ಪೊಲೀಸರ ಬಲೆಗೆ ಬಿದ್ದು, ಅನೇಕ ಬಾರಿ ಜೈಲೂಟವನ್ನೂ ಉಂಡಿದ್ದಾನೆ. ಆದ್ರೂ ಜಾಮೀನಿನ ಮೇಲೆ ಜಾಮೀನು ತೆಗೆದುಕೊಂಡು, ಮತ್ತದೆ ಕೃತ್ಯಕ್ಕೆ ಇಳಿತಾನೆ ಇದ್ದ.. ಇಂತ ಚೋರನ ಈಗ ಮತ್ತೆ ಪೊಲೀಸರ ಅತಿಥಿ ಆಗಿದ್ದಾನೆ.. ಈತನೇ ನೋಡಿ ಅಚ್ಯುತ್ ಘನಿ. ಬೆಂಗಳೂರು ಪೊಲೀಸರಿಗೆ ಮೋಸ್ಟ್ ವಾಟೆಂಡ್ ಫೆಲೋ..ನಾಯಿ ಬಾಲ ಡೊಂಕು ಅನ್ನುವಂತೆ ಈತನ ಕೆಲಸವೂ ಅಷ್ಟೆ.. ಅದೆಷ್ಟು ಬಾರಿ ಜೈಲಿಗೆ ಅಟ್ಟಿದ್ರು, ಬೇಲ್ ಪಡೆದು ಮತ್ತದೇ ಕೆಲಸಕ್ಕೆ ಇಳೀತಿದ್ದ.. ಸದ್ಯ ಕಳ್ಳತನದ ಕೇಸ್ ಒಂದ್ರಲ್ಲಿ ಶೇಷಾದ್ರಿಪುರಂ ಪೊಲೀಸರ ಬಲೆಗೆ ಬಿದ್ದಿರೋ ಅಚ್ಯುತ್ನಿಂದ 4 ಪ್ರಕಣಗಳು ಬೆಳಕಿಗೆ ಬಂದಿವೆ
ಯೆಸ್.. ಶೇಷಾದ್ರಿಪುರಂ ಪೊಲೀಸ್ ರಿಂದ ಅರೆಸ್ಟ್ ಆಗಿರೋ ಅಚ್ಯುತ್ ಘನಿಯಿಂದ ದಾವಣಗೆರೆ, ಗದಗ, ಸಿಕೆ ಅಚ್ಚುಕಟ್ಟು ವ್ಯಾಪ್ತಿಯ 4 ಕಳ್ಳತನ ಕೇಸ್ಗಳು ಕ್ಲಿಯರ್ ಆಗಿದೆ. ಹಾಗೆ 302 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನ ಮತ್ತೆ ಜೈಲಿಗಟ್ಟಿಲಾಗಿದೆ. ಆದ್ರೆ ಈತನ ಹಿಸ್ಟರಿ ಮಾತ್ರ ನಿಜಕ್ಕೂ ರೋಚಕ.. ನಿಜ.. ಮೂಲತಃ ಧಾರವಾಡ ಜಿಲ್ಲೆಯ ಕೋಳಿವಾಡದವನಾದ ಅಚ್ಯುತ್ ಕುಮಾರ್ ಘನಿ 2015 ರಲ್ಲಿ ಬೆಂಗಳೂರಿಗೆ ಬಂದು ಹೆಸರು ಬದಲಿಸಿಕೊಂಡಿದ್ದ.
ಬಳಿಕ ಕಳ್ಳತನದ ವೃತ್ತಿಗೆ ಇಳಿದು ಇದುವರೆಗೂ 154 ಸರಗಳ್ಳತನ ಮಾಡಿದ್ದಾನೆ. ಇಂತ ಖತರ್ನಾಕ್ಗೆ 2018 ರಲ್ಲಿ ಕೆಂಗೇರಿ ಠಾಣಾ ಪೊಲೀಸರು ಎರಡು ಕಾಲಿಗೂ ಗುಂಡು ಹೊಡೆದು ಬುದ್ಧಿ ಕಲಿಸಿದ್ರು. ಆದ್ರೆ ಕಳೆದ 6 ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ಈತ, ನಂದಿನಿ ಲೇ ಔಟ್ ಪೊಲೀಸರ ಕೈಗೆ ಮತ್ತೊಂದು ಕೇಸ್ನಲ್ಲಿ ತಗ್ಲಾಕ್ಕೊಂಡಿದ್ದ. ಆದ್ರೆ ಎರಡೇ ತಿಂಗಳಿಗೆ ಮತ್ತೆ ಜಾಮೀನು ಸಿಕ್ಕಿತ್ತು. ಹೀಗೆ ಹೊರಗಡೆ ಬಂದವನೇ 4 ಕಡೆಗಳಲ್ಲಿ ಮತ್ತೆ ಸರಗಳ್ಳತನ ಮಾಡಿ ಮತ್ತೇ ಕಂಬಿ ಹಿಂದೆ ಸೇರಿದ್ದಾನೆ.
ಇನ್ನು ಶೋಕಿ ಜೀವನಕ್ಕಾಗಿ ಸರಗಳ್ಳತನ ಮಾಡ್ತಾ ಇರೋ ಈ ಅಚ್ಯುತ್, ಇದುವರೆಗೂ 3 ಮದುವೆ ಆಗಿ ಶೋಕಿವಾಲ ಆಗಿದ್ದಾನೆ. ಸದ್ಯ ಕುಖ್ಯಾತನಾಗಿರೋ ಈತ ಮತ್ತೇ ಜೈಲು ಪಾಲಾಗಿದ್ದು, ಮತ್ತದೇ ಜಾಮೀನು, ಕಳ್ಳತನ.. ಜೈಲಿನ ಪರಿಪಾಠ ಮುಂದುವರಿಸುತ್ತಾನೋ ಏನೋ ಕುತೂಹಲಕಾರಿಯಾಗಿದೆ.