ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಕಸಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೆಲದಡಿ ಮೆಟ್ರೊ ನಿಲ್ದಾಣದಿಂದ ಬಾಷ್ ಕ್ಯಾಂಪಸ್ಗೆ ನೇರ ಸಂಪರ್ಕ ಒದಗಿಸಲು ಬಿಎಂಆರ್ಸಿಎಲ್ ಮತ್ತು ಬಾಷ್ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ ಎನ್ನಲಾಗಿದೆ.
ಮೆಟ್ರೊ ನಿಲ್ದಾಣದಿಂದ ಬಾಷ್ ಆವರಣಕ್ಕೆ ನೇರ ಸಂಪರ್ಕ ಒದಗಿಸಲು ಒಪ್ಪಂದ ಮಾಡಿಕೊಂಡಿರುವುದರಿಂದ ಬಾಷ್ ಸಂಸ್ಥೆಯ 1,200ಕ್ಕೂ ಅಧಿಕ ಉದ್ಯೋಗಿಗಳಿಗೆ ರಸ್ತೆ ದಾಟುವ ಪ್ರಯಾಸ ತಪ್ಪಲಿದೆ.
30 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನೆಲದಡಿ ಸಂಪರ್ಕ (70 ಅಡಿ ಉದ್ದ) ಕಾಮಗಾರಿಯನ್ನು ಬಿಎಂಆರ್ಸಿಎಲ್ ನಿರ್ವಹಿಸಲಿದೆ. ಅದರ ಅಂದಾಜು ವೆಚ್ಚ ₹ 30 ಕೋಟಿಯನ್ನು ಬಾಷ್ ಭರಿಸಲಿದೆ.
ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ರೀಚ್-6 ಮೆಟ್ರೊ ಮಾರ್ಗದಲ್ಲಿ ಇದು ಮೊದಲ ಒಪ್ಪಂದವಾಗಿದ್ದು, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮತ್ತು ಬಾಷ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಮಯ್ಯ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಹೇಳಲಾಗಿತ್ತಿದೆ.