ಹುಬ್ಬಳ್ಳಿ: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟದ ವತಿಯಿಂದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಕಳೆದ 50ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಧರಣಿ ನಿರತರು ಅರಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪರಿಶಿಷ್ಟ ಪಂಚಮ ಕುಲಭಾಂಧವರ ಒಕ್ಕೂಟದ ಮುಖಂಡ ಮಂಜುನಾಥ ಕೊಂಡಪಲ್ಲಿ ಮಾತನಾಡಿ, ಹಿಂದುಳಿದ ಪರಿಶಿಷ್ಟ ಸಮುದಾಯದಲ್ಲಿ ಆರ್ಥಿಕವಾಗಿ, ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸದಾಶಿವ ಆಯೋಗ ಜಾರಿ ಮಾಡಬೇಕು. ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಿದ್ದರೆ. ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಅನ್ಯರ ಮಾತಿಗೆ ಕಿವಿಗೊಡದೆ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಮೂಲ ಪರಿಶಿಷ್ಟರ ಹಿತಕ್ಕಾಗಿ ಸದಾಶಿವ ವರದಿ ಜಾರಿ ಮಾಡಬೇಕು.
ಈ ಆಯೋಗವು ಸಿದ್ದಪಡಿಸಿದ ವರದಿಯಲ್ಲಿ ಸ್ಪರ್ಶ ಮತ್ತು ಅಸ್ಪೃಶ್ಯ ಸಮುದಾಯಗಳ ಬಗ್ಗೆ ವೈಜ್ಞಾನಿಕವಾದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಸ್ಪರ್ಶ ಸಮುದಾಯಗಳ ಸಚಿವರು ಶಾಸಕರು ಈ ವರದಿಯ ಅನುಷ್ಠಾನ ಮಾಡಬಾರದೆಂದು ಮಾದಿಗ ಚಲುವಾದಿ ಸೇರಿದಂತೆ ಅಸ್ಪೃಶ್ಯ ಸಮುದಾಯದವರು ಯಾರೂ ಬೇರೆ ಸಮುದಾಯಗಳ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಆದರೆ ಸಾಮಾಜಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ನಮಗೆ ಸಿಗಬೇಕಾದ ಪ್ರಾತಿನಿಧ್ಯತೆಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸದಾಶಿವ ಆಯೋಗದ ವರದಿಯಲ್ಲಿ ಅಸ್ಪೃಶ್ಯ ಸಮುದಾಯಗಳ ಬಗ್ಗೆ ನ್ಯಾಯುತವಾದ ಸ್ಥಾನಮಾನಗಳು ದೊರಕಿಸಿಕೊಡುವಂತಹ ನಿರ್ದೇಶನಗಳು ಇದ್ದು ಸರ್ಕಾರ ಕೂಡಲೇ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕಾಗಿದೆ.
ನ್ಯಾಯಯುತವಾಗಿದೆ ಮತ್ತು ಸಂದರ್ಭ ಬಂದಲ್ಲಿ ರಾಷ್ಟ್ರ ಮಟ್ಟದಲ್ಲಿ ಈ ಕುರಿತು ಹೋರಾಟ ನಡೆಸಲು ಕೈ ಜೋಡಿಸಲು ಸಿದ್ಧರಿದ್ದೇವೆ ಎಂದು ಅನೇಕ ಸಂಘಟನೆಗಳ ಮುಖಂಡರು ಭರವಸೆ ನೀಡಿದರು.
ಈ ವೇಳೆ ಮುಖಂಡರಾದ ಶಂಕರ ಅಜಮನಿ, ಗಂಗಾಧರ ಪೆರೂರ, ಲೋಕಮಾನ್ಯ ರಾಮದತ್ತ, ಮೇಘರಾಜ ಹಿರೇಮನಿ, ಸೂರ್ಯನಾರಾಯಣ ಕನಮಕ್ಕಲ್, ರಂಗನಾಯಕ ತಪೇಲ, ದುರ್ಗಪ್ಪ, ಗೋವಿಂದ ಬೆಲ್ಡೋಣಿ, ಸೋಮಶೇಖರ ಸಾಕೆ, ಶ್ರೀನಿವಾಸ ಭೂದೇತಿ, ಗೋವಿಂದ ಬಂಡಮೀದಪಲ್ಲಿ ಒಳಗೊಂಡಂತೆ ಹೋರಾಟ ಸಮಿತಿಯ ಇನ್ನು ಅನೇಕರು ಉಪಸ್ಥಿತರಿದ್ದರು.
ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನೆಯ ರಾಷ್ಟ್ರೀಯ ಬೆಂಬಲ:
ಅನಿರ್ಧಿಷ್ಟಾವಧಿ ಧರಣಿಸ್ಥಳಕ್ಕೆ ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನೆಯ ರಾಷ್ಟ್ರೀಯ ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ
ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಸದಾನಂದ ತೇರದಾಳ, ಉತ್ತರಾಖಂಡದಿಂದ ಆಗಮಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಧನರಾಜ ಭಾರತಿ, ದೆಹಲಿಯ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷರು ಮತ್ತು ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಶ್ರೀಮತಿ ಸೋನಾ ಸಿಂಘ ತಮ್ಮ ಬೆಂಬಲ ಸೂಚಿಸಿದ್ದಾರೆ.