ಸಿನಿಮಾ ರಂಗದಲ್ಲಿ ಹಲವು ನಟಿಯರು ತಮಗಾದ ದೌರ್ಜನ್ಯಗಳ ಕುರಿತು ಮಾತನಾಡಿದ್ದಾರೆ. ಇದೀಗ 1990ರಿಂದ ಹಿಡಿದು ಸುಮಾರು 30 ವರ್ಷಗಳ ಕಾಲ ಸಿನಿರಂಗವನ್ನು ಆಳಿದ ನಟಿ ರಮ್ಯಾ ಕೃಷ್ಣನ್ ಕೂಡ ತಮಗಾಗಿರುವ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ರಮ್ಯಾ ಕೃಷ್ಣನ್ ಗೆ ಇದೀಗ 53 ವರ್ಷ ವಯಸ್ಸು. ಆದರೂ ಆಕೆಗಿರೋ ಸೌಂದರ್ಯ ಕೊಂಚವೂ ಕಮ್ಮಿಯಾಗಿಲ್ಲ. ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನಟಿ ತಮಗಾಗಿರುವ ಕರಾಳ ಅನುಭವನ್ನು ಬಿಚ್ಚಿಟ್ಟಿದ್ದಾರೆ. ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಸಮಸ್ಯೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಇದೆ. ಆದರೆ ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಎಲ್ಲರೂ ಹೆಚ್ಚಾಗಿ ಸಿನಿ ಸೆಲೆಬ್ರಿಟಿಗಳ ಕಾಸ್ಟಿಂಗ್ ಕೌಚ್ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ. ಕೆಲವರು ಸುಳ್ಳು ಸುದ್ದಿಗಳನ್ನೂ ಹರಡುತ್ತಾರೆ ಎನ್ನುವುದೂ ನಿಜ ಎಂದಿರುವ ನಟಿ, ಮಹಿಳೆಯರು ಸಿನಿಮಾದಲ್ಲಿ ಸ್ಟಾರ್ ಪಟ್ಟ ಗಳಿಸಬೇಕು ಎಂದರೆ ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕು. ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ನಾಯಕಿಯರಿಗೆ ಕಿರುಕುಳ ನೀಡುವುದರಲ್ಲಿ ಹೊಸದೇನೂ ಅಲ್ಲ ಎಂಬ ವಿಷಯವನ್ನೂ ತಿಳಿಸಿದ್ದಾರೆ. ಸದ್ಯ ರಮ್ಯಾ ಹೇಳಿಕೆ ಸೋಷಿಯ್ ಮೀಡಿಯಾದಲ್ಲಿ ವೈರಲ್ ಆಗಿದೆ.