ಮದ್ಯದ ಪರವಾನಗಿ ನೀಡಲು ಅಧಿಕಾರಿಗಳು ಲಂಚ ತಿನ್ನುತ್ತಿದ್ದಾರೆ ಅಂತ ಆಡಳಿತ ಪಕ್ಷದ ಸದಸ್ಯರೇ ಸರ್ಕಾರ ವಿರುದ್ಧ ಆರೋಪ ಮಾಡಿರುವ ಘಟನೆ ವಿಧಾನ ಪರಿಷತ್ ನಲ್ಲಿ ನಡೀತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ಪ್ರ ಶ್ನೆ ಕೇಳಿದರು. CL-7 ಮದ್ಯದ ಅಂಗಡಿಗೆ ಅನುಮತಿ ನೀಡಲು 80 ರಿಂದ 85 ಲಕ್ಷ ರೂ. ಲಂಚ ಪಡೆದು ಅನುಮತಿ ನೀಡಲಾಗುತ್ತಿದೆ. ನನ್ನ ಜಿಲ್ಲೆಯಲ್ಲಿಯೇ ಇದು ಆಗ್ತಿದೆ. ನಿಯಮ ಬಿಟ್ಟು ಲಕ್ಷಾಂತರ ರೂ. ಪಡೆದು CL7 ಅನುಮತಿ ನೀಡಲಾಗ್ತಿದೆ. ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದರು
ಮುಂದುವರಿದು ಕೋಲಾರದಲ್ಲಿ ಈ ಅಕ್ರಮ ದೊಡ್ಡದಾಗಿ ನಡೆಯುತ್ತಿದೆ. ತಾಲೂಕುವಾರು ಲಂಚ ಫಿಕ್ಸ್ ಮಾಡಿದ್ದಾರೆ. ಒಂದೊಂದು ತಾಲೂಕಿಗೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ರಾಜಾರೋಷವಾಗಿ ಲೈಸೆನ್ಸ್ ಕೊಟ್ಟು ಕಳ್ಳತನ ಮಾಡ್ತಿದ್ದಾರೆ. ಕಿರಾಣಿ ಅಂಗಡಿಗಳಲ್ಲಿ ಎಣ್ಣೆ ಸಿಗ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಒತ್ತಾಯಿಸಿದರು.
ಇದಕ್ಕೆ ಅಬಕಾರಿ ಸಚಿವ ತಿಮ್ಮಾಪುರ್ ಉತ್ತರ ನೀಡಿ, CL7ಗೆ ಅನುಮತಿ ಕೊಡಲು ನಮ್ಮದೇ ನಿಯಮ ಇವೆ. ನಿಯಮ ಪೂರೈಕೆ ಮಾಡಿದ್ರೆ ಮಾತ್ರ ಅನುಮತಿ ಕೊಡ್ತೀವಿ. ಅಧಿಕಾರಿಗಳು ಲಂಚ ಪಡೆಯೋ ವಿಚಾರಗಳು ನನ್ನ ಗಮನಕ್ಕೂ ಬಂದಿದೆ. ಅಂತಹವರ ಮೇಲೆ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದ್ರು.