ಬೆಂಗಳೂರು ;– ವಿಧಾನಮಂಡಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕಂದಾಯ ಇಲಾಖೆಯ ಭೂಕಬಳಿಕೆಯ ವಿಷಯದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ. ಟಿ. ಎ. ಶರವಣ ಅವರು ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಅಥವಾ ವೈಯಕ್ತಿಕ ವಿವಿಧ ಉದ್ದೇಶಗಳಿಗೆ ಕಬಳಿಕೆ ಮಾಡುತ್ತಿದ್ದರು ಕೂಡ ಅಧಿಕಾರ ವಹಿಸಿಕೊಂಡ ಯಾವ ಸರ್ಕಾರವೂ ಇದರ ಕುರಿತಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹೇಳಿದರು.
ಈ ಒಂದು ಅಕ್ರಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳ ಕೈವಾಡವಿದೆ ಅದರ ಕುರಿತಂತೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಬೇಕು ಎಂದು ಈ ವೇಳೆ ಅವರು ಒತ್ತಾಯಿಸಿದರು.
ರಾಜ್ಯದ ಗೋಮಾಳ ಭೂಮಿ, ಬೆಟ್ಟ ಪ್ರದೇಶಗಳನ್ನು ಉದ್ಯಮಿಗಳು ಮತ್ತು ಸಂಘ–ಸಂಸ್ಥೆಗಳಿಗೆ ಪರಭಾರೆ ಮಾಡಬಾರದು, ಗ್ರಾಮೀಣ ಭಾಗದ ಜನರ ಬದುಕನ್ನು ಕಾಯುವ ಮೂಲೆಸೆಲೆಗಳಲ್ಲೊಂದಾದ ಈ ಗೋಮಾಳ, ಬೆಟ್ಟ ಭೂಮಿಯನ್ನು ಸರ್ಕಾರ ರಕ್ಷಿಸಬೇಕೆಂದು ಅವರು ಮಂಡಿಸಿದ ವಿಷಯಕ್ಕೆ ಮಾನ್ಯ ಕಂದಾಯ ಸಚಿವರಾದ ಶ್ರೀ. ಕೃಷ್ಣ ಬೈರೇಗೌಡ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.